Home ಧಾರ್ಮಿಕ ಸುದ್ದಿ ಗುರುಪುರ ಬ್ರಹ್ಮಕಲಶ: ಆಮಂತ್ರಣ ಪತ್ರಿಕೆ ಬಿಡುಗಡೆ

ಗುರುಪುರ ಬ್ರಹ್ಮಕಲಶ: ಆಮಂತ್ರಣ ಪತ್ರಿಕೆ ಬಿಡುಗಡೆ

1394
0
SHARE

ಗುರುಪುರ: ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಲ್ಲಿ ಫೆಬ್ರವರಿ 3ರಿಂದ 7ರವರೆಗೆ ಜರಗಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜರಗಿತು.

ಮುಖ್ಯ ಅತಿಥಿಗಳಾಗಿ ಆಡಳಿತ ಮೊಕ್ತೇಸರ ಪ್ರಮೋದ್‌ ಕುಮಾರ್‌ ರೈ, ಯತಿರಾಜ ಶೆಟ್ಟಿ, ದಾಮೋದರ ನಿಸರ್ಗ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌, ಸುಕುಮಾರ್‌ ಶೆಟ್ಟಿ, ಪುರಂದರ ಮಲ್ಲಿ, ಸುಧಾಕರ ಶೆಟ್ಟಿ, ಪ್ರವೀಣ್‌ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ದೈವ ಪಾತ್ರಿಗಳಾದ ಚಂದ್ರಹಾಸ ಕೌಡೂರು, ತನಿಯಪ್ಪ ಪೂಜಾರಿ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ತಾ.ಪಂ. ಸದಸ್ಯ ಸಚಿನ್‌ ಅಡಪ, ಕಿಟ್ಟಣ್ಣ ರೈ, ಪ್ರೇಮನಾಥ ಮಾರ್ಲ, ವಿಲಾಸ್‌ ಶೆಟ್ಟಿ, ವಿನಯಕುಮಾರ್‌ ಶೆಟ್ಟಿ, ವಾಸುದೇವ ಭಟ್, ಗುತ್ತುಗಳ ಯಜಮಾನರು, ಸೇವಾ ಮನೆತನದವರು ಮತ್ತಿತರರು ಇದ್ದರು.

ಡಾ| ರವಿರಾಜ ಶೆಟ್ಟಿ ಕಾರಮೊಗರುಗುತ್ತು ಸ್ವಾಗತಿಸಿದರು. ಯಶವಂತ ಕೋಟ್ಯಾನ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here