ಕಡೆಯುವ ಕಲ್ಲು ಮತ್ತು ಒಲೆಯ ಮೇಲೆ ಕಾಲಿಟ್ಟು ಕುಳಿತುಕೊಳ್ಳುವುದು ಸರಿಯಲ್ಲ. ಹಾಗೆ ಕಾಲಿಟ್ಟರೆ ಅದು ತಾಯಿಯ ಎದೆಮೇಲೆ ಕಾಲಿಟ್ಟ ಹಾಗೆ. ನಾವು ಬಳಸುವ ವಸ್ತುಗಳ ಬಗ್ಗೆ ನಮಗೆ ಅತ್ಯಂತ ಗೊರವ, ಪೂಜ್ಯ ಭಾವ ಇರಬೇಕು. ಕಡೆಯುವ ಕಲ್ಲು ಮತ್ತು ಓಲೆ ಎರಡೂ ತಾಯಂದಿರು ಅಡುಗೆಗೆ ಅತಿ ಮುಖ್ಯವಾಗಿ ಬಳಸುವ ಸಾಧನಗಳು. ಅವುಗಳ ಶುಚಿತ್ವದ ದೃಷ್ಟಿಯಿಂದ, ಮತ್ತು ಅವುಗಳ ಬಗ್ಗೆ ಕೃತಜ್ಞತಾ ಭಾವನೆ ಮನಸಿನಲ್ಲಿ ಉಳಿಯಬೇಕೆಂದು ಈ ನಿಯಮಗಳಿವೆ.