Home ಧಾರ್ಮಿಕ ಕಾರ್ಯಕ್ರಮ ಗೋಪಾಡಿ ಶ್ರೀಚಿಕ್ಕು ಅಮ್ಮ ದೈವಸ್ಥಾನದ ಕೆಂಡೋತ್ಸವ

ಗೋಪಾಡಿ ಶ್ರೀಚಿಕ್ಕು ಅಮ್ಮ ದೈವಸ್ಥಾನದ ಕೆಂಡೋತ್ಸವ

677
0
SHARE

ಕೋಟೇಶ್ವರ: ಗೋಪಾಡಿ ಹಾವಳಿಕೆರೆ ಮಾಗಣೆಕಟ್ಟಿನ ಶ್ರೀಚಿಕ್ಕು ಅಮ್ಮನವರ ದೈವಸ್ಥಾನದ ಕೆಂಡಸೇವೆ ಸಹಸ್ರಾರು ಭಕ್ತರ ಸಮ್ಮುಖ ಮಂಗಳವಾರ ಸಂಭ್ರಮದಿಂದ ನೆರವೇರಿತು.

ಜ.28 ರಿಂದ ಜ.30 ರ ವರೆಗೆ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 15 ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಸೋಮವಾರ ರಾತ್ರಿ ನಡೆದ ಸಿಡಿ ಸೇವೆ ಹಾಗೂ ಬೀದಿ ಉತ್ಸವ ಗಮನ ಸೆಳೆಯಿತು. ಭಂಡಾರ ಮೊಕ್ತೇಸರರ ಮನೆಯಿಂದ ಚಿಕ್ಕು ಅಮ್ಮ ದೈವಸ್ಥಾನಕ್ಕೆ ಬ್ರಹ್ಮಲಿಂಗೇಶ್ವರ ದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.

ಮಂಗಳವಾರ ತುಲಾಭಾರ ಸೇವೆ, ಬೆಣಗಲ್ಲಿಗೆ ಕಾಯಿ ಒಡೆಯುವುದು, ಬಲಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here