ಬೆಳ್ತಂಗಡಿ : ತಾಲೂಕಿನಾದ್ಯಂತ ಚರ್ಚ್ಗಳಲ್ಲಿ ಪವಿತ್ರ ಶುಕ್ರವಾರ ಆಚರಣೆ ನಡೆಯಿತು.
ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಎ. 19ರಂದು ಚರ್ಚ್ನ ಪ್ರಧಾನ ಧರ್ಮಗುರು ವಂ| ಬೊನವೆಂಚರ್ ನಝರತ್ ಪ್ರಾರ್ಥನ ವಿಧಿವಿಧಾನ ನೆರವೇರಿಸಿದರು.
ಯೇಸುಕ್ರಿಸ್ತರು ಶಿಲುಬೆಗೇರುವ ಮೊದಲು ಶಿಲುಬೆಯನ್ನು ಹೊತ್ತು ಸಾಗಿದ ಘಟನಾವಳಿ ಸ್ಮರಿಸಿ, ಯೇಸು ಕ್ರಿಸ್ತರ ಮೂರ್ತಿಯನ್ನು ಯುವಕರು ಮೆರವಣಿಗೆಯಲ್ಲಿ ತಂದು ಶಿಲುಬೆ ಹಾದಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು.
ಧರ್ಮಗುರು ವಂ| ರೋಹನ್ ಲೋಬೋ, ಹಿರಿಯ ಧರ್ಮಗುರು ವಂ| ರೋಶನ್ ಡಿ’ಕುನ್ಹಾ, ವಂ| ನಾರೇಶ್ ಬಾರ್ಬೋಜಾ ಉಪಸ್ಥಿತರಿದ್ದರು.
ಸಾವಿರಾರು ಮಂದಿ ಕ್ರೈಸ್ತರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.