Home ಧಾರ್ಮಿಕ ಸುದ್ದಿ “ದೇವಸ್ಥಾನ ನಿರ್ಮಾಣ ಪುಣ್ಯದ ಕಾರ್ಯ’

“ದೇವಸ್ಥಾನ ನಿರ್ಮಾಣ ಪುಣ್ಯದ ಕಾರ್ಯ’

1509
0
SHARE

ಪೆರುವಾಯಿ : ಧರ್ಮಾಚರಣೆ ಮತ್ತು ಸಂರಕ್ಷಣೆ ಇಂದಿನ ಅಗತ್ಯ. ಧರ್ಮಾನುಷ್ಠಾನಕ್ಕೆ ದೇವಾಲಯ ಬೇಕು. ದೇವಾಲಯ ನಿರ್ಮಾಣ ಪುಣ್ಯದ ಕಾರ್ಯ. ಆ ಉತ್ಸವ ಉತ್ತಮವಾಗಿ ನಡೆಯಬೇಕು. ಭಗವಂತನ ಸೇವೆಯಲ್ಲಿ ಸರ್ವರೂ ಸಹಕಾರ ನೀಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ರವಿವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ನೆರವೇರಿಸಿ, ಆಶೀರ್ವಚನ ನೀಡಿ, ಸತ್ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡಿದಾಗ ಯಶಸ್ವಿ ಯಾಗುತ್ತದೆ ಎಂದು ತಿಳಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಪ್ಪ ಮಾರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ರೈ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತಾರಾನಾಥ ಕೊಟ್ಟಾರಿ, ವಿಶ್ವನಾಥ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಮನೋಹರ ಶೆಟ್ಟಿ ಪೇರಡ್ಕ, ವರುಣ್‌ ರೈ, ಯೋಗೀಶ್‌ ಆಳ್ವ, ಮಹಾಬಲೇಶ್ವರ ಭಟ್‌, ಚಂದ್ರಹಾಸ ಶೆಟ್ಟಿ, ರಾಜೇಂದ್ರನಾಥ ರೈ, ಪುರುಷೋತ್ತಮ ಶೆಟ್ಟಿ, ರಘುರಾಮ ಶೆಟ್ಟಿ, ಸದಾನಂದ ಶೆಟ್ಟಿ, ಕೃಷ್ಣ ನಾಯ್ಕ, ಗೋಪಾಲಕೃಷ್ಣ ಶೆಟ್ಟಿ, ರಾಜಶೇಖರ ಶೆಟ್ಟಿ, ಗೋಪಾಲ ಎ., ರವಿ ಕಡಂಬಿಲ, ಜಯರಾಮ ರೈ ಪೇರಡ್ಕ, ಪ್ರಭಾವತಿ ಆಳ್ವ, ಸರಸ್ವತಿ ತಚ್ಚಮೆ, ಸೀತಾ ಅಶ್ವಥನಗರ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಮಂಜು ನಾಥ ಶೆಟ್ಟಿ ವಂದಿಸಿದರು. ಅರ್ಚಕ ಹರ್ಷ ಗಣಪತಿ ಹವನ ನೆರವೇರಿಸಿದರು.

LEAVE A REPLY

Please enter your comment!
Please enter your name here