Home ಧಾರ್ಮಿಕ ಸುದ್ದಿ ಹರಿಹರೇಶ್ವರ ದೇಗುಲದಲ್ಲಿ ಗೊನೆ ಮುಹೂರ್ತ

ಹರಿಹರೇಶ್ವರ ದೇಗುಲದಲ್ಲಿ ಗೊನೆ ಮುಹೂರ್ತ

549
0
SHARE

ಸುಬ್ರಹ್ಮಣ್ಯ : ಹರಿಹರ ಪಳ್ಳತ್ತಡ್ಕ ಗ್ರಾಮದ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಮಾ. 20ರಿಂದ ವಾರ್ಷಿಕ ಜಾತ್ರೆ ಜರಗಲಿದ್ದು, ಮಾ. 14ರಂದು ದೇಗುಲದಲ್ಲಿ ಗೊನೆ ಮುಹೂರ್ತ ನಡೆಯಿತು. ದೇಗುಲದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್‌ ಗೊನೆ ಮುಹೂರ್ತ ನೆರವೇರಿಸಿದರು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್‌ ಕೂಜುಗೋಡು, ಗೌರವಾಧ್ಯಕ್ಷ ಡಾ| ಚಂದ್ರಶೇಖರ ಕಿರಿಭಾಗ, ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಮುಂಡಾಜೆ, ಶ್ರೀಧರ ಭಾಗವತ್‌, ಉಷಾ ಪ್ರಭಾಕರ ಕಿರಿಭಾಗ, ಶೈಲೇಶ್‌ ಕಟ್ಟೆಮನೆ, ಮಾಜಿ ಸದಸ್ಯರಾದ ತಾರಾನಾಥ ಮುಂಡಾಜೆ, ಕೇಶವ ಭಟ್‌ ಪಳ್ಳತ್ತಡ್ಕ, ಪ್ರಮುಖರಾದ ಉಮೇಶ್‌ ಕಜ್ಜೊಡಿ, ಗುಡ್ಡಪ್ಪ ಗೌಡ ಕುಧ್ಕುಳಿ, ನಾರಾಯಣ ಪುಳಿಕುಕ್ಕು, ಶಿವರಾಮ ಕಜ್ಜೊಡಿ, ಪೃಥ್ವೀಚಂದ್ರ ಮುಂಡಾಜೆ, ಕಿಶೋರ್‌ ಮುಂಡಾಜೆ, ನಿತ್ಯಾನಂದ ಎಲ್ಲಪಡ್ಕ, ಲೋಕಯ್ಯ ಕಿರಿಭಾಗ, ಶ್ರೀನಿಧಿ ಮಿತ್ತಮಜಲು ಶಿವಪ್ರಸಾದ್‌, ತೇಜಕುಮಾರ ಮುಂಡೋಕಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here