ಬಲ್ನಾಡು ಎ. 20: ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮಕ್ಕೆ ಪೂರ್ವಭಾವಿಯಾಗಿ ಶನಿವಾರ ಗೊನೆ ಮುಹೂರ್ತ ನೆರವೇರಿಸಲಾಯಿತು. ನೇಮ ನಡಾವಳಿ ಎ. 28ರಂದು ಜರಗಲಿದೆ.
ಶನಿವಾರ ದೈವಗಳ ಭಂಡಾರದ ಮನೆಯಲ್ಲಿ ಸಾಂಪ್ರದಾಯಿಕ ಪ್ರಾರ್ಥನೆ ಸಲ್ಲಿಸಿ ಅನಂತರ ದೈವಸ್ಥಾನದ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಅವರ ತೋಟದಲ್ಲಿ ಗೊನೆ ಮುಹೂರ್ತ ನೆರವೇರಿಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ, ಸದಸ್ಯರಾದ ಚಿದಾನಂದ ಬೈಲಾಡಿ, ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪ್ರಧಾನ ಅರ್ಚಕ ಸದಾಶಿವ ನೆಲ್ಲಿತ್ತಾಯ ಸಹಿತ ಭಕ್ತರು ಉಪಸ್ಥಿತರಿದ್ದರು.
ಅನ್ನಛತ್ರ ಉದ್ಘಾಟನೆ
ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ನಿರ್ಮಿಸಲಾದ ಸುಮಾರು 5,400 ಚದರ ಅಡಿ ವಿಸ್ತೀರ್ಣದ ನೂತನ ಅನ್ನಛತ್ರವನ್ನು ಶನಿವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲೋಕಾರ್ಪಣೆಗೊಳಿಸಲಾಯಿತು.