Home ಧಾರ್ಮಿಕ ಸುದ್ದಿ ಜಾತ್ರೆಗೆ ಗೊನೆ ಮುಹೂರ್ತ

ಜಾತ್ರೆಗೆ ಗೊನೆ ಮುಹೂರ್ತ

1867
0
SHARE

ಪುತ್ತೂರು : ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಪೂರ್ವ ಶಿಷ್ಟ ಸಂಪ್ರದಾಯದಂತೆ ಸೋಮವಾರ ಗೊನೆ ಮುಹೂರ್ತ ನಡೆಯಿತು. ಬೆಳಗ್ಗೆ ದೇಗುಲದಲ್ಲಿ ಪ್ರಾರ್ಥನೆಯ ಬಳಿಕ 9.46ರ ವೃಷಭ ಲಗ್ನ ಮುಹೂರ್ತದಲ್ಲಿ ದೇವಸ್ಥಾನದ ಪಕ್ಕದ ತೋಟದಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಬಾಳೆ ಗೊನೆಯನ್ನು ಕಡಿದು ಶ್ರೀ ದೇಗುಲಕ್ಕೆ ತರಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‌. ಭಟ್‌ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ್‌ ರಾವ್‌, ವ್ಯವಸ್ಥಾಪನ ಸಮಿತಿ ಸದಸ್ಯ ಅರ್ಚಕ ವಸಂತ ಕೆದಿಲಾಯ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ನಯನಾ ರೈ, ರೋಹಿಣಿ ಆಚಾರ್ಯ, ವಾಸ್ತು ಎಂಜಿನಿಯರ್‌ ಪಿ.ಜಿ. ಜಗನ್ನಿವಾಸ ರಾವ್‌, ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ನ್ಯಾಯವಾದಿ ಚಿದಾನಂದ ಬೈಲಾಡಿ, ಶೇಖರ್‌ ನಾರಾವಿ ಸಹಿತ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ವರ್ಷಂಪ್ರತಿಯಂತೆ ಕೊಟ್ಟಿಬೆಟ್ಟು ಏಳ್ನಾಡು ಗುತ್ತಿನವರಿಂದ ಅನ್ನಸಂತರ್ಪಣೆ ನಡೆಯಿತು.

ಎ. 10ರಂದು ಧ್ವಜಾರೋಹಣ
ಪ್ರತಿವರ್ಷ ಎ. 1ರಂದು ಶ್ರೀ ದೇಗುಲದಲ್ಲಿ ಜಾತ್ರಾ ಮಹೋತ್ಸವಕ್ಕೆ ಗೊನೆ ಕಡಿಯಲಾಗುತ್ತದೆ. ಗೊನೆ ಮುಹೂರ್ತದ 9 ದಿನಗಳ ಬಳಿಕ ಅಂದರೆ ಎ. 10ರಂದು ಶ್ರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ.

LEAVE A REPLY

Please enter your comment!
Please enter your name here