ಕಡಬ: ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಪುಂಡಿಕ್ ಮಾಡದಲ್ಲಿ ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರ ನೇತೃತ್ವದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ನೇಮ ನೆರವೇರಿತು.
ಫೆ. 20ರ ಬೆಳಗ್ಗೆ ಗರ್ಗಸ್ ಪಾಲ್ ಡೊಂಕಿಮಾರ್ ಚಾವಡಿಯಲ್ಲಿ ದೈವಜ್ಞ ಕೆ. ಪ್ರಸಾದ ಕೆದಿಲಾಯ ಅವರ ನೇತೃತ್ವದಲ್ಲಿ ಗಣಪತಿಹೋಮ, ದೈವಗಳ ಬಿಂಬ ಶುದ್ಧೀಕರಣ, ಪೂಜಾ ವಿಧಿ ವಿಧಾನಗಳು ನಡೆಯಿತು. ರಾತ್ರಿ ಸಂಪ್ರದಾಯದಂತೆ ರೆಂಜಿಲಾಡಿ ಬೀಡಿನ ಅರಸರಾದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಮಾಡಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಗರ್ಗಸ್ ಪಾಲ್ ಡೊಂಕಿಮಾರ್ ಚಾವಡಿಯಿಂದ ದೈವಗಳ ಭಂಡಾರವನ್ನು ಮಾಡಕ್ಕೆ ತಂದು ರಾತ್ರಿಯಿಂದ ಫೆ. 21ರ ಬೆಳಗ್ಗೆಯವರೆಗೆ ಶ್ರೀ ರಾಜನ್ದೈವ ಹಾಗೂ ಪರಿವಾರ ದೈವಗಳಿಗೆ ನೇಮ ನಡೆಯಿತು. ರಾತ್ರಿ ಹಳೆನೇರೆಂಕಿ ತಾಂಡವ ನೃತ್ಯಾಲಯದ ವಿದುಷಿ ಪ್ರತಿಮಾ ಶಿಷ್ಯರಿಂದ ನೃತ್ಯ ವೈಭವ ಜರಗಿತು.
ಮೀನಾಡಿ ಗುತ್ತು ಮಂಜುನಾಥ ಭಂಡಾರಿ, ಉಮೇಶ ಶೆಟ್ಟಿ ಸಾಯಿರಾಂ, ಪ್ರಧಾನ ಪರಿಚಾರಕರಾದ ಧರ್ಣಪ್ಪ ಗೌಡ ಪಿಲತ್ತಾಡಿ, ಪುರುಷೋತ್ತಮ ಗೌಡ ಗರ್ಗಸ್ ಪಾಲ್, ವಿಜಯ್
ಕುಮಾರ್ ಕೇಪುಂಜ, ಡೀಕಯ್ಯ ಗೌಡ ಪಾಡ್ಲ, ಯಶೋಧರ ಗೌಡ ಮಾರಪ್ಪೆ, ಭಾಸ್ಕರ ಗೌಡ ಏಳುವಾಲೆ, ಸುಂದರ ಮಡಿವಾಳ ಇಚ್ಲಂಪಾಡಿ, ದೈವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಬಂಡಿಗ, ಉಪಾಧ್ಯಕ್ಷ ಧರ್ಮಪಾಲ ಗರ್ಗಸ್ಪಾಲ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಪಲಯನಡ್ಕ, ಕಾರ್ಯದರ್ಶಿ ಮನೋಜ್ ಎನ್ಕಾಜೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಸೋಮಶೇಖರ ಕಲ್ಲುಗುಡ್ಡೆ ಶ್ರೀ ರಾಜನ್ ದೈವದ ನರ್ತನ ಸೇವೆ ಹಾಗೂ ಗುಳಿಗ ದೈವದ ನರ್ತನ ಸೇವೆಯನ್ನು ಧರ್ಣಪ್ಪ ಕಲ್ಲುಗುಡ್ಡೆ ನೆರವೇರಿಸಿದರು.