ಅಳಿಕೆ : ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಮಹಾದೇವಿ ಭಜನ ಮಂಡಳಿಯ ನೇತೃತ್ವದಲ್ಲಿ ಶ್ರೀ ಮಹಾ ದೇವಿ ಭಜನ ಮಂದಿರದ ಸುವರ್ಣ ಮಹೋತ್ಸವ ಸಮಾರಂಭ ಶುಕ್ರವಾರ ಆರಂಭಗೊಂಡಿತು.
ಮಾಣಿಲ ಶ್ರೀಧಾಮ ಶ್ರೀ ಮಹಾ ಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮ ಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಭಜನೆಯಿಂದ ಮಾನಸಿಕ ನೆಮ್ಮದಿ ಇರುತ್ತದೆ. ಭಜನೆಯ ಶಕ್ತಿ ಅಗಾಧ ವಾಗಿದೆ. ದೇಶದ ಅಂತಃಸತ್ವ ಉಳಿದಿದ್ದರೆ ಅದು ಭಜನೆಯಿಂದ ಎಂಬ ಅರಿವು ಬೇಕು. ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಯನ್ನು ಕಲಿಸುವ ಕೇಂದ್ರ ಭಜನ ಮಂದಿರ ಗಳಲ್ಲಾಗಬೇಕು. ಕಲ್ಲೆಂಚಿಪಾದೆ ಭಜನ ಮಂದಿರದಲ್ಲಿಯೂ ಶನಿವಾರ ಮತ್ತು ರವಿವಾರ ಅಂತಹ ಕಾರ್ಯಗಳಾಗಲಿ ಎಂದು ಆಶಿಸಿದರು.
ಧಾರ್ಮಿಕ ಸಭೆ
ಪುತ್ತೂರು ಶಾಸಕ ಸಂಜೀವ ಮಠಂದೂರು ಧಾರ್ಮಿಕ ಸಭೆ ಉದ್ಘಾಟಿಸಿ, ಭಜನ ಮಂದಿರ ರಸ್ತೆ ಅಭಿವೃದ್ಧಿಗೆ ನಾಲ್ಕು ಲಕ್ಷ ರೂ. ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ