Home ಧಾರ್ಮಿಕ ಸುದ್ದಿ ದೈವ, ಗುರುಬಲದಿಂದ ಸಮೃದ್ಧಿ: ರಾಘವೇಶ್ವರ ಶ್ರೀ

ದೈವ, ಗುರುಬಲದಿಂದ ಸಮೃದ್ಧಿ: ರಾಘವೇಶ್ವರ ಶ್ರೀ

247
0
SHARE

ಇಡ್ಕಿದು: ದೈವ ಬಲ, ಗುರು ಬಲದೊಂದಿಗೆ ಸಮಾಜದ ಸೇವೆಯಲ್ಲಿ ತೊಡಗಿದ್ದಾಗ ಸಮೃದ್ಧಿ ದೊರೆಯುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ
ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಉರಿಮಜಲುವಿನಲ್ಲಿ ನಿರ್ಮಾಣ ಗೊಳ್ಳುವ ಇಡ್ಕಿದು ಸೇವಾ ಸಹಕಾರ ಸಂಘದ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಬುಧವಾರ ಮಂತ್ರಾಕ್ಷತೆ ಮೂಲಕ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ನೂತನ ಕಟ್ಟಡದಲ್ಲಿ ದೇವರ ಕೋಣೆ ನಿರ್ಮಾಣ ಮಾಡಲು ಉದ್ದೇಶಿಸಿದ ಆಡಳಿತ ಮಂಡಳಿಯ ತೀರ್ಮಾನಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದ ಸ್ವಾಮೀಜಿ ಇದು ಸಂಸ್ಥೆ ಯನ್ನು ಬೆಳಗಿಸುವ ಸಜ್ಜನರ ನಿರ್ಧಾರ ಉತ್ತಮವಾಗಿದೆ ಎಂದರು.

ಅಧ್ಯಕ್ಷ ಗೋಪಾಲ ಕೃಷ್ಣ ಭಟ್‌ ಬೈಪದವು ಪ್ರಾಸ್ತಾವಿಕ ಮಾತನಾಡಿ, 1.60 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗುತ್ತದೆ. ಮುಂದಿನ ವಾರ್ಷಿಕ ಸಭೆಯೊಳಗೆ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಅಡ್ಯಾಲು, ನಿರ್ದೇಶಕರಾದ ಜಗದೀಶ್‌ ಡಿ. ದೇವಸ್ಯ, ವನಜಾಕ್ಷಿ ಎಸ್‌. ಭಟ್‌, ಎಂ.ಎಚ್‌. ರಮೇಶ್‌ ಭಟ್‌, ನಾರಾಯಣ ಶೆಟ್ಟಿ ಪಾಂಡೇಲು, ಪ್ರವೀಣ್‌ ಕುಮಾರ್‌ ಕೊಪ್ಪಳ, ನಾರಾಯಣ ನೇರ್ಲಾಜೆ, ಚಂದ್ರಕಲಾ ಪಿಲಿಪ್ಪೆ, ಕೊಂಕೊಡಿ ಪದ್ಮನಾಭ, ಅಮೃತ ಸಿಂಚನ ರೈತ ಒಕ್ಕೂಟದ ಅಧ್ಯಕ್ಷ ಪ್ರಫ‌ುಲ್ಲಚಂದ್ರ, ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ನೌಕರರು ಉಪಸ್ಥಿತರಿದ್ದರು. ಅಧ್ಯಕ್ಷ ಗೋಪಾಲಕೃಷ್ಣ ಭಟ್‌ ಸ್ವಾಗತಿಸಿ, ಸಿಇಒ ಈಶ್ವರ ನಾಯ್ಕ ವಂದಿಸಿದರು. ಈಶ್ವರ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here