Home ಧಾರ್ಮಿಕ ಸುದ್ದಿ ಭಕ್ತಿಯಿಂದ ಭಗವಂತನ ಕೃಪೆ: ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಭಕ್ತಿಯಿಂದ ಭಗವಂತನ ಕೃಪೆ: ಶ್ರೀ ಧರ್ಮಪಾಲನಾಥ ಸ್ವಾಮೀಜಿ

994
0
SHARE

ಮಹಾನಗರ: ಹಲವಾರು ಭಕ್ತರು ಒಟ್ಟುಸೇರಿ ಶ್ರಮವಹಿಸಿ ನಿಸ್ವಾ ರ್ಥದಿಂದ ಎಲ್ಲರಿಗೂ ಒಳಿತಾಗಲಿ ಎಂಬ ಸದುದ್ದೇಶದಿಂದ ಮಾಡುವ ಶನೈಶ್ಚರ ಯಾಗದ ಫಲ ಎಲ್ಲರಿಗೂ ಪ್ರಾಪ್ತಿಯಾಗಲಿ. ಯಾರು ದೇವರಿಗೆ ಮುಖ ಮಾಡಿ ರುತ್ತಾರೋ ಅವರಿಗೆ ದೇವರು ಮುಖ ಮಾಡಿ ಒಳಿತನ್ನು ಮಾಡುತ್ತಾರೆ ಎಂದು ಕಾವೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಹಿಂದೂ ಯುವ ಸೇನಾ ಆಶ್ರಯದಲ್ಲಿ ಪದವು ಮೇಗಿನ ಮನೆ ವಠಾರದಲ್ಲಿ ನಡೆಯುತ್ತಿರುವ ಸಗ್ರಹಮಖ ಶ್ರೀ ಶನೈಶ್ಚರ ಮಹಾಯಾಗದ ತೃತೀಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನಿಟ್ಟೆಗುತ್ತು ರವಿರಾಜ್‌ ಶೆಟ್ಟಿ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ವಿನ್ಸೆಂಟ್ ಕೊರೆಯಾ, ನಿತಿನ್‌ ಕುಮಾರ್‌ ಶೆಟ್ಟಿ, ಮಾಜಿ ಮೇಯರ್‌ ಅಬ್ದುಲ್‌ ಅಜೀಜ್‌, ಗುತ್ತಿಗೆ ದಾರ ಅಬ್ಟಾಸ್‌ ಆಗಮಿಸಿದ್ದರು. ಈ ಸಂದರ್ಭ ಕುಲಶೇಖರದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ವೇ| ಮೂ| ಸೀತಾರಾಮ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

ಗೌರವಾದ್ಯಕ್ಷರಾದ ವಾಸುದೇವ ಆರ್‌. ಕೊಟ್ಟಾರಿ, ಪಿ. ಕರುಣಾಕರ ಆಳ್ವ, ಮೋನಪ್ಪ ಭಂಡಾರಿ, ಕಾಂತಿ ಶೆಟ್ಟಿ, ಯಶೋಧರ ಚೌಟ, ಕೋಶಾಧಿಕಾರಿ ಭಾಸ್ಕರಚಂದ್ರ ಶೆಟ್ಟಿ, ಸಂಚಾಲಕ ರಾಮಚಂದ್ರ ಚೌಟ, ಸಂಘಟನ ಕಾರ್ಯದರ್ಶಿ ಅಶ್ವಿ‌ತ್‌ ಕೊಟ್ಟಾರಿ, ಸಮಿತಿಯ ಪ್ರಮುಖರಾದ ದೇವಿ ಪ್ರಸಾದ್‌, ಗಣೇಶ್‌, ಸತೀಶ್‌ ಪೂಜಾರಿ ಉಪಸ್ಥಿತರಿದ್ದರು.ಯಾಗ ಸಮಿತಿ ಕಾರ್ಯಾಧ್ಯಕ್ಷ ಎಚ್.ಕೆ.ಪುರುಷೋತ್ತಮ ಸ್ವಾಗತಿಸಿ, ಪ್ರಸ್ತಾವನೆಗೈದರು, ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕೊಟ್ಟಾರಿ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here