Home ಧಾರ್ಮಿಕ ಸುದ್ದಿ ಗೋವಾದ ಕವಳೆ ಮಠದಲ್ಲಿ ರಜತ ಚಾತುರ್ಮಾಸ್ಯ

ಗೋವಾದ ಕವಳೆ ಮಠದಲ್ಲಿ ರಜತ ಚಾತುರ್ಮಾಸ್ಯ

ಶ್ರೀ ಗೌಡಪಾದಾಚಾರ್ಯ ಶಿವಾನಂದ ಸರಸ್ವತೀ ಸ್ವಾಮೀಜಿ

1816
0
SHARE

ಉಡುಪಿ: ಗೋವಾದ ಪೋಂಡಾಕವಳೆಯಲ್ಲಿರುವ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀಮದ್‌ ಶಿವಾನಂದ ಸರಸ್ವತೀ ಸ್ವಾಮೀಜಿಯವರ ರಜತ ಮಹೋತ್ಸವದ ಚಾತುರ್ಮಾಸ್ಯ ಕವಳೆಯಲ್ಲಿರುವ ಸ್ವಮಠದಲ್ಲಿ ಜು.12ರಿಂದ ಸೆ.14ರ ವರೆಗೆ ನಡೆಯಲಿದೆ.

ಜು.16ರಂದು ನಡೆಯುವ ಗುರುಪೂರ್ಣಿಮೆ ಯಂದು ಕೈವಲ್ಯ ಮಠಾಧೀಶರು ವ್ಯಾಸಪೂಜೆ ಯೊಂದಿಗೆ ವ್ರತವನ್ನು ಆರಂಭಿಸಲಿದ್ದಾರೆ. ಪಾದ್ಯ ಪೂಜೆಯ ಬಳಿಕ ಆಶೀರ್ವಚನ ನೀಡಲಿದ್ದಾರೆ.

ಎರಡು ತಿಂಗಳು ನಡೆಯಲಿರುವ ಚಾತುರ್ಮಾಸ್ಯದ ವೇಳೆ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿವಿಧ ಹಬ್ಬ-ಹುಣ್ಣಿಮೆಗಳನ್ನು ಆಚರಿಸಲಾಗುತ್ತದೆ. ಶ್ರಾವಣ ಸೋಮವಾರ, ಲಘುರುದ್ರ ಸ್ವಾಹಾಕಾರ್‌, ಪ್ರದೋಷ ಪೂಜಾ, ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಸೆ.14ರಂದು ಚಾತುರ್ಮಾಸ್ಯ ಸಮಾಪ್ತಿಗೊಳ್ಳಲಿದೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ವಿವಿಧ ಸೇವೆಗಳನ್ನು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೈವಲ್ಯ ಮಠದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here