Home ಧಾರ್ಮಿಕ ಸುದ್ದಿ “ಮಕ್ಕಳಿಗೆ ಎಳೆಪ್ರಾಯದಲ್ಲಿಯೇ ಸಂಸ್ಕಾರ ನೀಡಿ’

“ಮಕ್ಕಳಿಗೆ ಎಳೆಪ್ರಾಯದಲ್ಲಿಯೇ ಸಂಸ್ಕಾರ ನೀಡಿ’

1831
0
SHARE

ಮುನ್ನೂರು: ಮಕ್ಕಳಿಗೆ ಎಳೆಪ್ರಾಯದಲ್ಲಿಯೇ ಸಂಸ್ಕಾರ ತಿಳಿಹೇ ಳುವುದರ ಜತೆಗೆ ತಪ್ಪುದಾರಿ ಹಿಡಿದಾಗ ಹೆತ್ತವರು ತಿದ್ದುವ ಕೆಲಸ ಮಾಡಬೇಕು ಎಂದು ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುನ್ನೂರು ಗ್ರಾಮದ ಶ್ರೀ ಸೋಮನಾಥ ಉಳಿಯದ ಶ್ರೀ ಸೋಮೇಶ್ವರೀ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣ ಕಾರ್ಯಕ್ರಮದ ಬಳಿಕ ಅವರು ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ಕುಂಟಾರು ರವೀಶ್‌ ತಂತ್ರಿ ಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ಶ್ರೀದೇವಿಗೆ ಸ್ವರ್ಣ ಮುಖವಾಡವನ್ನು ಸಮರ್ಪಿಸಲಾಯಿತು.

ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಜೆ. ರವೀಂದ್ರ ನಾಯ್ಕ, ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ಯು. ದಯಾನಂದ ನಾಯ್ಕ ಕುಲಶೇಖರ, ಕಾರ್ಯಾಧ್ಯಕ್ಷ ಶಿವಾನಂದ ನಾಯ್ಕ ಸೋಮನಾಥ ಉಳಿಯ, ಕೋಶಾಧಿಕಾರಿ ಧರ್ಮಪಾಲ್‌ ನಾಯ್ಕ, ಶ್ರೀ ಅರಸು, ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್‌. ರಾಮ ನಾಯ್ಕ, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ ಹರೇಕಳ, ಉಪಾಧ್ಯಕ್ಷ ರಂಜನ್‌ ನಾಯ್ಕ ಮಣ್ಣಗುಡ್ಡೆ, ಜತೆ ಕಾರ್ಯದರ್ಶಿ ವೆಂಕಟೇಶ್‌ ಬಂಟ್ವಾಳ, ಕೋಶಾಧಿಕಾರಿ ಚಂದ್ರಶೇಖರ ಬಪ್ಪಾಲ್‌, ಶ್ರೀ ಸೋಮೇಶ್ವರಿ ಸೌ.ಸ.ಸಂಘದ ಅಧ್ಯಕ್ಷ ಉಮಾನಾಥ ನಾಯ್ಕ ಉಳ್ಳಾಲ, ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಕಸ್ತೂರಿ ಎಸ್‌. ನಾಯ್ಕ , ಮಾಜಿ ಅಧ್ಯಕ್ಷೆ ಹೇಮಾ ಮಂಕಿಸ್ಟ್ಯಾಂಡ್‌, ಅಜಿತ್‌ ನಾಯ್ಕ ಮುಂಬಯಿ ಮೊದಲಾದವರಿದ್ದರು. ಕೋಡಿ ಜಯ ನಾಯ್ಕ ಸ್ವಾಗತಿಸಿ, ವಂದಿಸಿ, ಮಹಾ ಚಂಡಿಕಾಹೋಮ ಮತ್ತು ದೇಗುಲದ ಪ್ರಧಾನ ಅರ್ಚಕ ಅಶ್ವಿ‌ನ್‌ ಭಟ್‌ ಮಹಾಪೂಜೆ ನೆರವೇರಿಸಿದರು.

ಜೀವನ ಸುವರ್ಣಮಯ ಭಜನೆಯಿಂದ ವಿಭಜನೆಯಿಲ್ಲ, ಕೇವಲ ನವರಾತ್ರಿಯಲ್ಲದೆ ಪ್ರತಿನಿತ್ಯವು ದುರ್ಗೆಯ ನಾಮಸ್ಮರಣೆ ಮಾಡುವ ಮೂಲಕ ತಮ್ಮ ಜೀವನವನ್ನು
ಸುವರ್ಣಮಯಗೊಳಿಸಬೇಕು.
– ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿ ಉಡುಪಿ ಅದಮಾರು ಮಠಾಧೀಶರು

LEAVE A REPLY

Please enter your comment!
Please enter your name here