Home ಧಾರ್ಮಿಕ ಕಾರ್ಯಕ್ರಮ ಗಂಗೊಳ್ಳಿ: ತಪ್ತ ಮುದ್ರಾಧಾರಣೆ

ಗಂಗೊಳ್ಳಿ: ತಪ್ತ ಮುದ್ರಾಧಾರಣೆ

918
0
SHARE

ಕುಂದಾಪುರ : ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ 350ನೇ ಪ್ರತಿಷ್ಠಾ ವರ್ಧಂತಿ ಸಮಾರಂಭದ ಅಂಗವಾಗಿ ತಪ್ತ ಮುದ್ರಾಧಾರಣೆ ಹಾಗೂ ಶ್ರೀದೇವರಿಗೆ ಅಷ್ಟೋತ್ತರ ಪ್ರದಕ್ಷಿಣೆ ನಮಸ್ಕಾರ, ದ್ವಾದಶ ಸ್ತೋತ್ರ ಪೂಜೆ ಸೋಮವಾರ ಜರಗಿತು.

ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್‌ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಸಮಾಜ ಬಾಂಧವರಿಗೆ ಮುದ್ರಾಧಾರಣೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರಿಗೆ ದ್ವಾದಶ ಸ್ತೋತ್ರ ಪೂಜೆ, ಮಹಾಪೂಜೆ ಜರಗಿತು.

ದೇಗುಲದ ಪ್ರಧಾನ ಅರ್ಚಕ ಎಸ್‌. ವೆಂಕಟರಮಣ ಆಚಾರ್ಯ, ತಾಂತ್ರಿಕ ಜಿ. ವಸಂತ ಭಟ್‌, ಆಡಳಿತ ಮೊಕ್ತೇಸರ ಎನ್‌.ಸದಾಶಿವ ನಾಯಕ್‌, ಕಾರ್ಯದರ್ಶಿ ಜಿ.ವೆಂಕಟೇಶ ನಾಯಕ್‌, ವೇ| ಮೂ| ಜಿ.ವೇದವ್ಯಾಸ ಆಚಾರ್ಯ, ಜಿ.ನಾರಾಯಣ ಆಚಾರ್ಯ, ವೈದಿಕರು, ಪುರೋಹಿತರು, ದೇಗುಲದ ಆಡಳಿತ ಮಂಡಳಿ ಸದಸ್ಯರು, ಭಜಕರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here