ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಮತ್ಸ್ಯ ಸಂಪತ್ತು ಮತ್ತಷ್ಟು ವೃದ್ಧಿಯಾಗಲಿ, ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸದಿರಲಿ, ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಇರದೆ ಪರಸ್ಪರ ಏಕತೆ, ಸೌಹಾರ್ದದಿಂದ ಮೀನುಗಾರಿಕೆಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಗುರುವಾರ ಹಾಲು, ಸೀಯಾಳ, ಫಲಪುಷ್ಪವನ್ನು ಸಮುದ್ರರಾಜನಿಗೆ ಅರ್ಪಿಸಿದರು.
ಗಂಗೊಳ್ಳಿಯ ಪರ್ಸಿನ್ ಬೋಟ್, ಫಿಶಿಂಗ್ ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘಗಳಿಂದ ಸಮುದ್ರ ಪೂಜೆ ನಡೆಯಿತು.
ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ ಗಂಗೊಳ್ಳಿಯ ಅಧ್ಯಕ್ಷ ರಮೇಶ್ ಕುಂದರ್, ಬಸವ ಖಾರ್ವಿ, ಮಂಜುನಾಥ ಖಾರ್ವಿ, ಗಣೇಶ ಖಾರ್ವಿ, ರಾಘವೇಂದ್ರ ಮೇಸ್ತ, ಸುಬ್ರಹ್ಮಣ್ಯ ಖಾರ್ವಿ, ರಾಘವೇಂದ್ರ ಮಡಿವಾಳ, ಜಯಂತ್ ನಾವುಂದ, ವಿಕ್ರಮ್, ಭಾಸ್ಕರ್ ಆರ್ಕಾಟಿ, ಪ್ರಭಾಕರ್ ಕುಂದರ್, ಪ್ರಭಾಕರ್ ವೈ.ಎಚ್., ಸುಂದರ್ ಡಿ. ಖಾರ್ವಿ ಹಾಗೂ ಮೀನುಗಾರರು ಪಾಲ್ಗೊಂಡಿದ್ದರು