ಗಂಗೊಳ್ಳಿ: ಗಂಗೊಳ್ಳಿಯ ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವರ ಸನ್ನಿಧಿಯಿಂದ ಶ್ರೀ ಕ್ಷೇತ್ರ ಪಂಢರಾಪುರದ ಶ್ರೀ ವಿಠ್ಠಲನ ಸನ್ನಿಧಿಗೆ ಜೂ. 8ರಂದು ಪಾದಯಾತ್ರೆ ಕೈಗೊಂಡಿದ್ದ ಗೌಡ ಸಾರಸ್ವತ ಸಮಾಜದ 13 ಮಂದಿ ಜೂ.23ರಂದು ಪಂಡರಾಪುರ ತಲುಪಿದ್ದಾರೆ.
580 ಕಿ.ಮೀ. ದೂರ
ಪಾದಯಾತ್ರೆ ಮೂಲಕ ಕ್ರಮಿಸಿದ ಪಾದ ಯಾತ್ರಿಗಳು ಯಾವುದೇ ತೊಂದರೆಗಳಿಲ್ಲದೆ ಸುಮಾರು 580 ಕಿ.ಮೀ. ದೂರದ ಪಂಢರಾಪುರ ತಲುಪಿದ್ದು, ಚಂದ್ರಭಾಗ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದ ಇವರು, ದೇವಸ್ಥಾನದಲ್ಲಿ ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಜರಗಿದ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಗಂಗೊಳ್ಳಿಗೆ ಮರಳಿದ್ದಾರೆ.
ಗಂಗೊಳ್ಳಿ ಗ್ರಾ.ಪಂ. ಸದಸ್ಯ ಬಿ.ಗಣೇಶ ಶೆಣೈ ಮತ್ತು ಕೃಷ್ಣ ಪಡಿಯಾರ್ ನೇತೃತ್ವದಲ್ಲಿ ನವೀನ ಭಟ್ ಹಟ್ಟಿಯಂಗಡಿ, ಗಣೇಶ ಕಿಣಿ, ವಿಜೇಶ ಪಡಿಯಾರ್, ಕೆ.ಹರೀಶ ನಾಯಕ್, ಜಿ.ವಿಜೇಂದ್ರ ನಾಯಕ್, ಜಿ.ವಿಷ್ಣುದಾಸ ಭಟ್, ಶ್ರೀಧರ ಪ್ರಭು, ಜಿ. ಪ್ರಶಾಂತ ನಾಯಕ್, ಸತೀಶ ಕಾಮತ್, ನಿತ್ಯಾನಂದ ಪೈ, ಪ್ರಕಾಶ ಪ್ರಭು, ಮಧು ಗಂಗೊಳ್ಳಿ ಪಾದಯಾತ್ರೆ ನಡೆಸಿದರು.