ಕುಂದಾಪುರ: ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ 350ನೇ ಪ್ರತಿಷ್ಠಾ ವರ್ಧಂತಿ ಸಮಾರಂಭದ ಅಂಗವಾಗಿ ದೇಗುಲದ ಶ್ರೀ ದ್ವಾರಕನಾಥ ತೀರ್ಥ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ರವಿವಾರ ಸಂಜೆ ಜರಗಿತು.
ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟ ಶಿಷ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಕೋಟ ಶಾಂತಾರಾಮ ನಾಯಕ್ ದಂಪತಿ ಸೇವಾರೂಪದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇಗುಲದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ದೇಗುಲದ ತಾಂತ್ರಿಕ ಜಿ. ವಸಂತ ಭಟ್, ಆಡಳಿತ ಮೊಕ್ತೇಸರ ಎನ್. ಸದಾಶಿವ ನಾಯಕ್, ಕಾರ್ಯದರ್ಶಿ ಜಿ.ವೆಂಕಟೇಶ ನಾಯಕ್, ವೇ|ಮೂ| ಜಿ. ವೇದವ್ಯಾಸ ಆಚಾರ್ಯ, ಜಿ. ನಾರಾಯಣ ಆಚಾರ್ಯನ ಮತ್ತಿತರರು ಉಪಸ್ಥಿತರಿದ್ದರು.