Home ಧಾರ್ಮಿಕ ಸುದ್ದಿ ಪರ್ತಗಾಳಿ ಶ್ರೀಗಳ ಚಾತುರ್ಮಾಸ್ಯ ಸಮಾಪನ

ಪರ್ತಗಾಳಿ ಶ್ರೀಗಳ ಚಾತುರ್ಮಾಸ್ಯ ಸಮಾಪನ

1100
0
SHARE

ಗಂಗೊಳ್ಳಿ: ಬದ್ರಿನಾಥದ ಬದ್ರಿಕಾಶ್ರಮದಲ್ಲಿ ಜು. 27ರಿಂದ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್‌ ವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟಶಿಷ್ಯ ಶ್ರೀಮತ್‌ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಶನಿವಾರ ಮೃತ್ತಿಕಾ ವಿಸರ್ಜನೆಯೊಂದಿಗೆ ಚಾತುರ್ಮಾಸ ವ್ರತವನ್ನು ಸಮಾಪನಗೊಳಿಸಿದರು.

ಅಖಂಡ ಮಾಧ್ವ ಮಠಗಳ ಗುರು ಪರಂಪರೆಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್‌ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಯವರು ಭೂವೈಕುಂಠ ಖ್ಯಾತಿಯ ಶ್ರೀ ಬದರಿನಾಥನಲ್ಲಿ ಎರಡು ಬಾರಿ ಚಾತುರ್ಮಾಸ್ಯ ವ್ರತವನ್ನಾಚರಿಸಿದ ಏಕೈಕ ಯತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here