ಮಂಗಲ್ಪಾಡಿ: ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಹಾಗೂ ನವೀಕೃತ ಮಂದಿರದ ಪ್ರವೇಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧªತಾ ಸಭೆ ಗಣೇಶ ಮಂದಿರದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ ಆಳ್ವ ತಿಂಬರ ಅಧ್ಯಕ್ಷತೆ ವಹಿಸಿದರು. ಹಿರಿಯರಾದ ರಾಮಕೃಷ್ಣ ಹೊಳ್ಳ ತಿಂಬರ, ಮಂದಿರದ ಭಜನಾ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ಪ್ರತಾಪನಗರ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪ್ರತಾಪನಗರ ಗಣೇಶೋತ್ಸವ ಹಾಗೂ ಪ್ರವೇಶೋತ್ಸವದ
ಸಿದ್ಧತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಮಂದಿರದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಮಹಿಳಾ ಸಂಘ, ಸ್ವಸಹಾಯ ಸಂಘಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರ ಸಹಿತ ನೂರಾರು ಮಂದಿ ಪಾಲ್ಗೊಂಡು ಸಲಹೆ ಸೂಚನೆಗಳನ್ನಿತ್ತರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಉತ್ಸವ ಸಮಿತಿಯನ್ನು ರಚಿಸಲಾಯಿತು. ಸವಿತಾ ರಾಘವೇಂದ್ರ ಆಚಾರ್ಯ ಪ್ರಾರ್ಥನೆ ಹಾಡಿದರು. ಸೋಮನಾಥ ಶೆಟ್ಟಿ ಮಂಗಲ್ಪಾಡಿ ಸ್ವಾಗತಿಸಿ, ಅನಿಲ್ ಕುಮಾರ್ ವಂದಿಸಿದರು.