Home ಧಾರ್ಮಿಕ ಸುದ್ದಿ ಶೋಭಾಯಾತ್ರೆಯೊಂದಿಗೆ ಗಣೇಶ ವಿಗ್ರಹ ಜಲಸ್ತಂಭನ

ಶೋಭಾಯಾತ್ರೆಯೊಂದಿಗೆ ಗಣೇಶ ವಿಗ್ರಹ ಜಲಸ್ತಂಭನ

1465
0
SHARE

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರ ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 4 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ನಡೆದ 52ನೇ ವರ್ಷದ ಗಣೇಶೋತ್ಸವವು ರವಿವಾರ ಸಂಜೆ ಆಕರ್ಷಕ ಶೋಭಾಯಾತ್ರೆಯೊಂದಿಗಿನ ಗಣಪತಿ ವಿಗ್ರಹದ ಜಲಸ್ತಂಭನದೊಂದಿಗೆ ಸಮಾಪನಗೊಂಡಿತು.

ಬೆಳಗ್ಗೆ ಭಜನ ಕಾರ್ಯಕ್ರಮ, ಗಣಪತಿ ಹವನ, ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಸಾವಿರಾರು ಮಂದಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಂಜೆ ಭಕ್ತಿ ರಸಮಂಜರಿಯ ಬಳಿಕ ಶೋಭಾಯಾತ್ರೆ ನಡೆಯಿತು.

ವೈವಿಧ್ಯಮಯ ಕಣ್ಮನ ಸೆಳೆಯುವ ಟ್ಯಾಬ್ಲೋಗಳ ಆಕರ್ಷಣೆಯೊಂದಿಗೆ ಶ್ರೀ ದೇವಸ್ಥಾನದಿಂದ ಕೋರ್ಟು ರಸ್ತೆಯ ಮೂಲಕ ಬೊಳುವಾರಿಗೆ ಸಾಗಿ, ಅಲ್ಲಿಂದ ಬಸ್‌ ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ, ಎಂ.ಟಿ. ರಸ್ತೆಯ ಮೂಲಕ ಮರಳಿ ದೇವಸ್ಥಾನದ ರಥಬೀದಿ ಬಳಿಯ ಕೆರೆಯಲ್ಲಿ ಗಣಪತಿ ವಿಗ್ರಹದ ಜಲಸ್ತಂಭನ ನಡೆಯಿತು.

ಸಮಿತಿಯ ಅಧ್ಯಕ್ಷ ಶಶಾಂಕ್‌ ಕೋಟೆಚಾ, ಗೌರವಾಧ್ಯಕ್ಷ ಡಾ| ಎಂ.ಕೆ. ಪ್ರಸಾದ್‌, ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ, ಪದಾಧಿಕಾರಿಗಳು, ನೂರಾರು ಭಕ್ತರು ಶೋಭಾಯಾತ್ರೆಯ ಉದ್ದಕ್ಕೂ ಸಾಗಿದರು.

LEAVE A REPLY

Please enter your comment!
Please enter your name here