Home ನಂಬಿಕೆ ಸುತ್ತಮುತ್ತ ಗಣಪ ಬದುಕಿಗೆ ದಾರಿದೀಪ

ಗಣಪ ಬದುಕಿಗೆ ದಾರಿದೀಪ

3008
0
SHARE

ಆದಿಪೂಜಿತ ತ್ರಿಲೋಕವಂದಿತ ದೇವರೆಂದರೆ ಗಣಪತಿ. ನಿರ್ವಿಘ್ನದಾಯಕನಾದ ಗಣಪ ಯಾವುದೇ ಕಾರ್ಯದ ಆರಂಭದಲ್ಲಿಯೇ ಪೂಜಿಸಲ್ಪಡುವಾತ. ಎಂತಹ ದೊಡ್ಡ ಯಜ್ಞಯಾಗಾದಿಗಳಿದ್ದರೂ ಮೊತ್ತ ಮೊದಲು ಪೂಜಿಸಿ, ಪ್ರಾರ್ಥಿಸುವುದು ಈ ಗಣಪನನ್ನೇ. ಗಣಪತಿಯ ರೂಪ, ಆತನ ಜನ್ಮದ ಕಥೆಗಳೆಲ್ಲವೂ ಕುತೂಹಲಕಾರಿ ಮತ್ತು ಭಿನ್ನವಾದುವು. ಪಾರ್ವತಿದೇವಿ ತನ್ನ ಬೇಸರ ಕಳೆಯಲೆಂದು ನಿರ್ಮಿಸಿದ ಮಣ್ಣಿನಮೂರ್ತಿ ನಾವೆಲ್ಲರೂ ಮೆಚ್ಚುವ, ಪ್ರೀತಿಸುವ ಮತ್ತು ಪೂಜಿಸುವ ಶಕ್ತಿಯಾದ ಈ ಗಣಪನ ಬಗ್ಗೆ ನಮಗೆಲ್ಲರಿಗೂ ಗೊತ್ತು. ಗಣಪನನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಅರಿವಿಗೆ ಬರುವುದು ಗಣಪ ಕೇವಲ ವಿಭಿನ್ನವಾದ ಶರೀರದಿಂದ ಕೂಡಿದ ದೇವರಷ್ಟೇ ಅಲ್ಲ, ನಮ್ಮ ಜೀವನಕ್ಕೆ ದಾರಿದೀಪವೂ ಹೌದು ಎಂಬುದು. ಹಾಗಾಗಿ ಗಣಪ ಬದುಕಿನ ದಾರಿದೀಪ.

ಗಣಪನನ್ನು ಮೊತ್ತಮೊದಲು ಪೂಜಿಸಿವುದಕ್ಕೂ ಕಾರಣವಿದೆ. ಆತ ದಾರಿತೋರುವ ಗುರುವೂ ಆಗಿದ್ದಾನೆ. ಆತನ ದೇಹವೇ ನಾವು ಹೇಗೆ ಜೀವಿಸಬೇಕೆಂಬುದನ್ನು ತೋರಿಸುತ್ತದೆ. ಆನೆಯ ಮೊಗ, ದೊಡ್ಡದಾದ ಹೊಟ್ಟೆ, ಚತುರ್ಭುಜಗಳನ್ನು ಹೊಂದಿದ ಮನೋಹರವಾದ ಗಣಪನ ರೂಪ ಬದುಕಿನ ಪ್ರತಿರೂಪವೂ ಹೌದು. ಆನೆಯ ಮೊಗ ಅಂದರೆ ದೊಡ್ಡದಾದ ತಲೆ. ಇದು ನಾವು ವಿಶಾಲವಾದ ಮನೋಭಾವನೆಯನ್ನು ಹೊಂದಬೇಕೆಂಬುದರ ಸೂಚಕ. ಮತ್ತು ಸದೃಢವಾದ ಉತ್ತಮ ಯೋಚನೆಗಳು ನಮ್ಮ ತಲೆಯಲ್ಲಿರಬೇಕೇ ಹೊರತು ಅನಗತ್ಯ ವಿಚಾರಗಳು ಸುಳಿಯಬಾರದೆಂಬುದರ ಸಂಕೇತವೂ ಹೌದು. ಇನ್ನು ಸಣ್ಣದಾದ ಕಣ್ಣು ಇದು ಸೌಜನ್ಯದ ಸಂಕೇತ. ಸೊಂಡಿಲು ನಮ್ಮ ಆಗ್ರಾಣಶಕ್ತಿಯು ವಿಶಾಲವೂ ಸೂಕ್ಷ್ಮವೂ ಆಗಿದ್ದು ಸುವಾಸನೆಯತ್ತವೇ ಚಿತ್ತವಿರಸಬೇಕೆಂಬುದರ ಸಂಕೇತ. ಇಲ್ಲಿ ಸುವಾಸನೆಯೆಂದರೆ ಒಳ್ಳೆಯತನ. ಇದರತ್ತವೇ ನಮ್ಮ ಏಕಾಗ್ರತೆ ಇರಬೇಕು ಎಂಬುದು ಇದರ ಮತಿತಾರ್ಥ. ಇನ್ನು ಅಗಲವಾದ ಕಿವಿ. ಎಲ್ಲವನ್ನೂ ಕೇಳುವ ತಾಳ್ಮೆ ನಮ್ಮಲ್ಲಿರಬೇಕೆಂಬುದನ್ನು ತಿಳಿಸುತ್ತದೆ. ಆನೆ ಕಿವಿಯನ್ನು ಬೀಸಣಿಗೆಯಂತೆ ಬೀಸುತ್ತಲೇ ಇರುತ್ತದೆ. ಅದರಂತೆ ನಾವು ದುರ್ವಿಚಾರಗಳನ್ನು ಕಿವಿಯೊಳಕ್ಕೆ ಬಿಡದೆ ದೂರವಿಡಬೇಕೆಂಬುದನ್ನು ತಿಳಿಹೇಳುತ್ತದೆ. ಇನ್ನುದೊಡ್ಡ ಹೊಟ್ಟೆ, ಸಣ್ಣ ಕೈ ಕಾಲುಗಳು ಕೇವಲ ಆಕಾರವನ್ನು ಪ್ರೀತಿಸುವುದಲ್ಲ ಆಚಾರವನ್ನು ಪಾಲಿಸುವುದು ಮುಖ್ಯ ಎಂಬುದನ್ನು ಸೂಚಿಸುತ್ತವೆ. ಅಲ್ಲಿಗೆ ಇಡಿಯ ಬದುಕಿನ ಯಶಸ್ಸು ಹೇಗೆ ಸಾಧ್ಯ ಎಂಬುದು ಸಂಕೇತರೂಪದಲ್ಲಿ ಗಣಪನಿದ್ದಾನೆ.

ಗಣಪನ ಚಿತ್ರಣವೇ ನಮಗೆ ಶಕ್ತಿ, ಯುಕ್ತಿ, ಮುಕ್ತಿ ಎಲ್ಲ. ನಾವೊಂದು ಕಾರ್ಯವನ್ನು ಆರಂಭಿಸುವಾಗ ಗಣಪನನ್ನು ಆರಾಧಿಸುತ್ತೇವೆ ಎಂದರೆ ಗಣಪನ ರೂಪದಂತೆ ಇಡೀ ದೇಹ ಮತ್ತು ಮನಸ್ಸನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಕೊಳ್ಳಬೇಕೆಂದರ್ಥ. ಬದುಕಿನ ಪ್ರತಿಕ್ಷಣದಲ್ಲಿಯೂ ಮನಸ್ಸಿನ ನಿಯಂತ್ರಣದಲ್ಲಿ ನಮ್ಮ ದೇಹವಿರಬೇಕು ಮತ್ತು ಆ ಮನಸ್ಸು ಶುದ್ಧವಾಗಿಯೂ ಧರ್ಮಯುತವಾಗಿಯೂ ಇರಬೇಕೆಂಬುದನ್ನು ನಾವು ಗಣಪನನ್ನು ನೋಡಿ ಅರಿಯಬೇಕಾಗಿದೆ. ಗಣಪತಿಗೆ ಸಂಬಂಧಿಸಿದ ಎಲ್ಲಾ ಪುರಾಣ ಕಥೆಗಳೂ ನಮ್ಮ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಒಂದು ಕಥೆಯು ಶಕ್ತಿಯನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಹೇಳಿದರೆ ಇನ್ನೊಂದು ಕಥೆಯು ಯುಕ್ತಿಯನ್ನು ಬಳಸುವುದನ್ನು ಹೇಳಿಕೊಡುತ್ತದೆ. ಹಾಗಾಗಿಯೇ ಈ ಗಣಪ ಬದುಕಿನ ದಾರಿದೀಪ. ಗಣಪನೆಂಬ ಅಂದ, ಆಕಾರ, ಶಕ್ತಿ ಈ ಎಲ್ಲವೂ ನಮಗೆ ಪ್ರೇರಕ. ಅರಿವಿನ ಕಣ್ಣು ತೆರೆದು ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ದೇವರ ಮೂರ್ತರೂಪವು ನಮ್ಮನ್ನು ಹೇಗೆ ಪ್ರಜ್ಞಾವಂತರನಾಗಿಸುತ್ತದೆ ಎಂಬುದು ತಿಳಿಯುವುದು.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್ಟ ಹೊಸ್ಮನೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here