Home ಧಾರ್ಮಿಕ ಸುದ್ದಿ ಗಣಪತಿ ಎನ್ನಪಾಲಿಸೋ ಗೌರಿತನಯ

ಗಣಪತಿ ಎನ್ನಪಾಲಿಸೋ ಗೌರಿತನಯ

2282
0
SHARE

ಪಂಚದೇವೋಪಾಸನೆಯಲ್ಲಿ ಗಣೇಶನ ಉಪಾಸನೆಯೂ ಒಂದು. ಆದಿತ್ಯಂ ಗಣನಾಥಂ ಚ ದೇವೀಂ ರುದ್ರಂಚ ಕೇಶವಂ| ಪಂಚದೈವತಮಿತ್ಯುಕ್ತಂ ಸರ್ವಕರ್ಮಸು ಪೂಜಯೇತ್‌ ಎಂದು ಶಬ್ದಕಲ್ಪದ್ರುಮದ ಉಕ್ತಿ. ಪಂಚದೇವತೆಗಳು ಪಂಚಭೌತಿಕ ತಣ್ತೀಗಳಿಗೆ ಒಡೆಯರು. ಆಕಾಶಕ್ಕೆ ಅಧಿಪತಿ ವಿಷ್ಣು. ಅಗ್ನಿಗೆ ದುರ್ಗೆ, ವಾಯುಗೆ ಸೂರ್ಯನು, ಭೂಮಿಗೆ ಶಿವ, ಜೀವ ಮತ್ತು ಜಲ ತಣ್ತೀಕ್ಕೆ ಗಣಪತಿ. .. .. ಜೀವನಸ್ಯ ಗಣಾಧಿಪಃ. ಗಣಪತಿಯನ್ನು ಸರ್ವದೇವಮಯ ಎಂದು ವರ್ಣಿಸಲಾಗಿದೆ. ಗಣೇಶಾದಿ ಪಂಚದೇವತಾಭೊÂà ನಮಃ ಎಂದೇ ಪೂಜೆಯ ಆರಂಭ. ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ, ಶರಣು ಸಿದ್ಧಿ ವಿನಾಯಕ, ಗಜವದನ ಬೇಡುವೆ.

ಶರಣು ಬೆನಕನೆ ಕನಕ ರೂಪನೆ, ಏಕದಂತನೆ ಲೋಕಖ್ಯಾತನೆ, ಆದಿಯಲಿ ಗಜಮುಖನ ಅರ್ಚಿಸು – ಎಂದರು ದಾಸವರೇಣ್ಯ ಪುರಂದಾಸರು. ಗಣಪತಿಯನ್ನು ಸಿದ್ಧಿದೇವತೆ ಎಂದು ವರ್ಣಿಸುತ್ತಾರೆ. ಅವನು ವಿದ್ಯಾಪ್ರದಾಯಕ. ಅವನನ್ನು ಆದಿಯಲ್ಲಿ ಪೂಜಿಸಬೇಕು. ಅವನು ಕನಕ ರೂಪನು.ಲೋಕಖ್ಯಾತನು ಎಂದಿದ್ದಾರೆ.
ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ | ಮತಿ ಪ್ರೇರಿಸುವಳು ಪಾರ್ವತಿ.. . . . ಮನವನೀವ ಮಹಾರುದ್ರ . . . ಕುತಿದಾಯಕಳು ಭಾರತಿ. . . . . ಕುತಿಶಾಸ್ತ್ರಗಳಲಿ ವನಜ ಸಂಭವ. . . .ಸುಜ್ಞಾನ ಮತಿಯಿತ್ತು ಗತಿ ಪಾಲಿಸುವ ಪವಮಾನ… ಆನಂದಸುಖವನೀವಳು ರಮಾ. . . ನಮ್ಮ ಪುರಂದರ ವಿಠಲ .. .

ಗಣನಾಥ ಸಿದ್ಧಿಯನ್ನುಂಟು ಮಾಡುವಾಗ, ಮತಿಯನ್ನು ಪ್ರೇರೇಪಿಸುವವಳು ಪಾರ್ವತಿ. ಮನವನು ನೀಡುವವನು ರುದ್ರ. ಭಕ್ತಿಯನ್ನೀಯುವವಳು ಭಾರತೀ ದೇವಿ. ಶಾಸ್ತ್ರದಲ್ಲಿ ಮನಸ್ಸನ್ನು ನೀಡುವವಳು ಸರಸ್ವತಿ. ಸುಜ್ಞಾನ ಮತಿಯನ್ನು ನೀಡುವವನು ಮುಖ್ಯಪ್ರಾಣ. ಆನಂದ ಪ್ರದಾಯಕಳು ರಮಾದೇವಿ ಎಂದು ದಾಸರು ಹಾಡಿದ್ದಾರೆ.

ಮಂದ ಮತಿಯನ್ನು ಬಿಡಿಸಿ ಚೆಂದ ಜ್ಞಾನವನ್ನು ಕರುಣಿಸು ಗಜಮುಖನೆ ಎಂದು ವ್ಯಾಸರಾಯರು ಪ್ರಾರ್ಥಿಸುತ್ತಾರೆ. ಗಣಪತಿಯು ವೇದಕಾಲದಿಂದ ದಾಸ ಕಾಲದವರೆಗೂ ಆರಾಧನಾ ದೇವರಾಗಿ ಪೂಜೆಗೊಳ್ಳುತ್ತಿದ್ದಾನೆ. ಗಣಪತಿಯು ಪಾರ್ವತೀ ಪುತ್ರ. ವಿಷ್ಣುವಿನ ಕೃಷ್ಣನ ಅವತಾರವೆಂದೂ ಪುರಾಣಗಳಲ್ಲಿ ಉಲ್ಲೇಖವಿದೆ! ಚಾರುದೇಷ್ಣೆಯಲ್ಲಿ ಗಣಪತಿಯೇ ಹುಟ್ಟಿದನೆಂದು ಉಕ್ತಿ. ಆದ್ದರಿಂದ ಗಣಪತಿಯು ಸರ್ವಜನಾದರಣೀಯನೂ ಹೌದು. ನಾರಾಯಣ ಸ್ವರೂಪವೇ ಗಣಪತಿ ಎಂದು ಕೆಲವರು ಆರಾಧಿಸುತ್ತಾರೆ. ಹರಿಃ ಶ್ರೀ ಗಣಪತಯೇ ನಮಃ ಎಂದು ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುವ ಸಂಪ್ರದಾಯ ಕೇರಳ ಭಾಗದಲ್ಲಿದೆ.
ನನ್ನ ಶರೀರದಲ್ಲಿ ನೀನು ನಿಂತು ಧರ್ಮ ಪ್ರೇರಿತನಾಗು. ಮೂಕರನ್ನು ವಾಗ್ಮಿಗಳನ್ನಾಗಿ ಮಾಡು ಎಂದು ಜಗನ್ನಾಥದಾಸರು ಹಾಡಿದ್ದಾರೆ.

ಸಂಕಷ್ಟಚತುರ್ಥಿಗ – ನಮ್ಮ ಗಣಪ !

ಸಂಕಷ್ಟಚತುರ್ಥಿಗ ನೆಂದು ಜಗನ್ನಾಥದಾಸರು ಗಣಪನನ್ನು ಸ್ತುತಿಸಿದ್ದಾರೆ. ಸಂಕಷ್ಟ, ಸಂಕಷ್ಟ ಚತುರ್ಥಿ, ಸಂಕಷ್ಟಹರ ಚೌತಿ ವ್ರತವನ್ನು ಆಚರಿಸುವವರು ಬಹುಮಂದಿ. ಅದರ ಹಿನ್ನೆಲೆ ಏನು? ದೇವೇಂದ್ರನ ವಿಮಾನವು ಒಮ್ಮೆ ಬೃಷಂಡಿ ಮರ್ಹಷಿ (ಗಣಪತಿಯ ಪರಮಭಕ್ತ)ಯ ಆಶ್ರಮದಿಂದ ವಾಪಾಸಾಗುತ್ತಿರುವಾಗ ರಾಜಾ ಶೂರಸೇನನ ಸಾಮ್ರಾಜ್ಯದ ಮೇಲೆ ಹಾರುತ್ತಿತ್ತು. ಓರ್ವ ವ್ಯಕ್ತಿ ಆ ವಿಮಾನವನ್ನು ಆಗಸದಲ್ಲಿ ಕಂಡನಂತೆ. ತಕ್ಷಣ ವಿಮಾನ ಧರೆಗಿಳಿಯತಂತೆ. ಕಾರಣ, ಆ ವ್ಯಕ್ತಿ ತನ್ನ ಜೀವನದಲ್ಲಿ ಅನೇಕ ಪಾಪಗಳನ್ನು ಮಾಡಿದ್ದನಂತೆ. ಶೂರಸೇನ ಇಂದ್ರನ ಬಳಿ ತೆರಳಿ ಪೂಜಿಸಿದನಂತೆ. ವಿಮಾನವೇತಕೆ ಇಳಿಯಿತೆಂದು ಶೂರಸೇನ ಇಂದ್ರನಲ್ಲಿ ಕೇಳಿದನಂತೆ. ಓರ್ವ ಪಾಪಿಷ್ಟ ವಿಮಾನವನ್ನು ನೋಡಿದ, ವಿಮಾನ ಕೆಳಗಿಳಿಯಿತು ಎಂದನಂತೆ ಇಂದ್ರ. ವಿಮಾನ ಪುನಃ ಹಾರುವ ಬಗೆ ಹೇಗೆ ಎಂದು ರಾಜ ಕೇಳಿದಾಗ, ಸಂಕಷ್ಟ ಚತುರ್ಥಿಯಂದು ವ್ಯಕ್ತಿಯೋರ್ವನು ಬಂದು ಹರಸಿದರೆ ವಿಮಾನ ಹಾರುತ್ತದೆ ಎಂದನಂತೆ ಇಂದ್ರ. ಆ ವ್ಯಕ್ತಿಗಾಗಿ ರಾಜ್ಯದಲ್ಲೆಲ್ಲ ಹುಟುಕಾಟ ನಡೆಸಲಾಯ್ತು. ಯಾರು ಪತ್ತೆಯಾಗಲಿಲ್ಲ! ಆ ಸಮಯದಲ್ಲಿ ಗಣೇಶನ ದೂತನೋರ್ವನು ಮೃತ ಮಹಿಳೆಯ ಶರೀರವನ್ನು ಗಣೇಶ ಲೋಕಕ್ಕೆ ಕೊಂಡೊಯ್ಯುತ್ತಿದ್ದನು. ಆ ಪಾಪಿದೇಹವನ್ನು ಏಕೆ ಗಣಪತಿಯಲ್ಲಿಗೆ ಕೊಂಡೊಯ್ಯುವೆ ಎಂದು ಭಟರು ಪ್ರಶ್ನಿಸಿದರಂತೆ. ಈ ಅಸ್ವಸ್ಥ ಮಹಿಳೆ ಏನೂ ತಿಂದಿಲ್ಲ. ಚಂದ್ರೋದಯದ ಬಳಿಕ ಎಚ್ಚತ್ತು ಸ್ವಲ್ಪ ಆಹಾರವನ್ನು ಸೇವಿಸಿದ್ದಳು. ಅವಳಿಗೆ ಅರಿವಿಲ್ಲದೇನೇ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಿದ್ದಳು ಎಂದರಂತೆ ಗಣೇಶನ ದೂತರು. ಯಾರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಮ್ಮೆಯಾದರೂ ಈ ವ್ರತವನ್ನು ಆಚರಿಸಿದರೆ ಸತ್ತ ಬಳಿಕ ಗಣೇಶಲೋಕಕ್ಕೆ ತೆರಳುತ್ತಾರೆ. ಭಟರು ಆ ಮೃತಶರೀರವನ್ನು ದೂತರಿಂದ ಪಡೆಯುವಲ್ಲಿ ವಿಫ‌ಲರಾದರು. ಆದರೂ ಮೃತಶರೀರದ ಮೇಲಿಂದ ಹಾದುಹೋದ ಗಾಳಿ ವಿಮಾನವನ್ನು ಸ್ಪರ್ಶಿಸಿದ ತಕ್ಷಣ ಅದು ಮೇಲೇರಿ ಹೋಯಿತು. ಸಂಕಷ್ಟಹರ ವ್ರತನಿಷ್ಠ ಮೃತಶರೀರಕ್ಕೂ ಅಂತಹ ಅದ್ಭುತ ಶಕ್ತಿಯಿದೆ!

ಗಣಪತಿಗೆ ಆನೆಯ ಸೊಂಡಿಲನ್ನು ಜೋಡಿಸಿ ಮರುಜೀವ ಕೊಟ್ಟ ದಿನವೂ ಸಂಕಷ್ಟ ಚತುರ್ಥಿ ಎಂದು ಇನ್ನೊಂದು ಕಥೆಯಿದೆ.
ವರ್ಷದಲ್ಲಿ ಅಧಿಕ ಮಾಸವೂ ಸೇರಿದಂತೆ 13 ಸಂಕಷ್ಟ ಗಣಪತಿ ಪೂಜೆಯನ್ನು ಮಾಡಬೇಕು. ಒಂದೊಂದು ಮಾಸದಲ್ಲಿ ಗಣಪತಿಯ ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ಪೀಠದ ಹೆಸರಿನಲ್ಲಿ ಪೂಜಿಸಬೇಕೆಂದಿದೆ. ಭಾದ್ರಪದ ಮಾಸದಲ್ಲಿ ವಿN°àಶ್ವರ ಪೀಠದಲ್ಲಿ ವಿಘ್ನರಾಜ ಮಹಾಗಣಪತಿಯನ್ನು ಆರಾಧಿಸಬೇಕು.

ಸಂಕಷ್ಟಚತುರ್ಥಿಗ ನೆಂದು ಜಗನ್ನಾಥದಾಸರು ಗಣಪನನ್ನು ಸ್ತುತಿಸಿದ್ದಾರೆ. ಸಂಕಷ್ಟ, ಸಂಕಷ್ಟ ಚತುರ್ಥಿ, ಸಂಕಷ್ಟಹರ ಚೌತಿ ವ್ರತವನ್ನು ಆಚರಿಸುವವರು ಬಹುಮಂದಿ. ಅದರ ಹಿನ್ನೆಲೆ ಏನು? ದೇವೇಂದ್ರನ ವಿಮಾನವು ಒಮ್ಮೆ ಬೃಷಂಡಿ ಮರ್ಹಷಿ (ಗಣಪತಿಯ ಪರಮಭಕ್ತ)ಯ ಆಶ್ರಮದಿಂದ ವಾಪಾಸಾಗುತ್ತಿರುವಾಗ ರಾಜಾ ಶೂರಸೇನನ ಸಾಮ್ರಾಜ್ಯದ ಮೇಲೆ ಹಾರುತ್ತಿತ್ತು. ಓರ್ವ ವ್ಯಕ್ತಿ ಆ ವಿಮಾನವನ್ನು ಆಗಸದಲ್ಲಿ ಕಂಡನಂತೆ. ತಕ್ಷಣ ವಿಮಾನ ಧರೆಗಿಳಿಯತಂತೆ. ಕಾರಣ, ಆ ವ್ಯಕ್ತಿ ತನ್ನ ಜೀವನದಲ್ಲಿ ಅನೇಕ ಪಾಪಗಳನ್ನು ಮಾಡಿದ್ದನಂತೆ. ಶೂರಸೇನ ಇಂದ್ರನ ಬಳಿ ತೆರಳಿ ಪೂಜಿಸಿದನಂತೆ. ವಿಮಾನವೇತಕೆ ಇಳಿಯಿತೆಂದು ಶೂರಸೇನ ಇಂದ್ರನಲ್ಲಿ ಕೇಳಿದನಂತೆ. ಓರ್ವ ಪಾಪಿಷ್ಟ ವಿಮಾನವನ್ನು ನೋಡಿದ, ವಿಮಾನ ಕೆಳಗಿಳಿಯಿತು ಎಂದನಂತೆ ಇಂದ್ರ. ವಿಮಾನ ಪುನಃ ಹಾರುವ ಬಗೆ ಹೇಗೆ ಎಂದು ರಾಜ ಕೇಳಿದಾಗ, ಸಂಕಷ್ಟ ಚತುರ್ಥಿಯಂದು ವ್ಯಕ್ತಿಯೋರ್ವನು ಬಂದು ಹರಸಿದರೆ ವಿಮಾನ ಹಾರುತ್ತದೆ ಎಂದನಂತೆ ಇಂದ್ರ. ಆ ವ್ಯಕ್ತಿಗಾಗಿ ರಾಜ್ಯದಲ್ಲೆಲ್ಲ ಹುಟುಕಾಟ ನಡೆಸಲಾಯ್ತು. ಯಾರು ಪತ್ತೆಯಾಗಲಿಲ್ಲ! ಆ ಸಮಯದಲ್ಲಿ ಗಣೇಶನ ದೂತನೋರ್ವನು ಮೃತ ಮಹಿಳೆಯ ಶರೀರವನ್ನು ಗಣೇಶ ಲೋಕಕ್ಕೆ ಕೊಂಡೊಯ್ಯುತ್ತಿದ್ದನು. ಆ ಪಾಪಿದೇಹವನ್ನು ಏಕೆ ಗಣಪತಿಯಲ್ಲಿಗೆ ಕೊಂಡೊಯ್ಯುವೆ ಎಂದು ಭಟರು ಪ್ರಶ್ನಿಸಿದರಂತೆ. ಈ ಅಸ್ವಸ್ಥ ಮಹಿಳೆ ಏನೂ ತಿಂದಿಲ್ಲ. ಚಂದ್ರೋದಯದ ಬಳಿಕ ಎಚ್ಚತ್ತು ಸ್ವಲ್ಪ ಆಹಾರವನ್ನು ಸೇವಿಸಿದ್ದಳು. ಅವಳಿಗೆ ಅರಿವಿಲ್ಲದೇನೇ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಿದ್ದಳು ಎಂದರಂತೆ ಗಣೇಶನ ದೂತರು. ಯಾರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಮ್ಮೆಯಾದರೂ ಈ ವ್ರತವನ್ನು ಆಚರಿಸಿದರೆ ಸತ್ತ ಬಳಿಕ ಗಣೇಶಲೋಕಕ್ಕೆ ತೆರಳುತ್ತಾರೆ. ಭಟರು ಆ ಮೃತಶರೀರವನ್ನು ದೂತರಿಂದ ಪಡೆಯುವಲ್ಲಿ ವಿಫ‌ಲರಾದರು. ಆದರೂ ಮೃತಶರೀರದ ಮೇಲಿಂದ ಹಾದುಹೋದ ಗಾಳಿ ವಿಮಾನವನ್ನು ಸ್ಪರ್ಶಿಸಿದ ತಕ್ಷಣ ಅದು ಮೇಲೇರಿ ಹೋಯಿತು. ಸಂಕಷ್ಟಹರ ವ್ರತನಿಷ್ಠ ಮೃತಶರೀರಕ್ಕೂ ಅಂತಹ ಅದ್ಭುತ ಶಕ್ತಿಯಿದೆ! ಗಣಪತಿಗೆ ಆನೆಯ ಸೊಂಡಿಲನ್ನು ಜೋಡಿಸಿ ಮರುಜೀವ ಕೊಟ್ಟ ದಿನವೂ ಸಂಕಷ್ಟ ಚತುರ್ಥಿ ಎಂದು ಇನ್ನೊಂದು ಕಥೆಯಿದೆ.

ವರ್ಷದಲ್ಲಿ ಅಧಿಕ ಮಾಸವೂ ಸೇರಿದಂತೆ 13 ಸಂಕಷ್ಟ ಗಣಪತಿ ಪೂಜೆಯನ್ನು ಮಾಡಬೇಕು. ಒಂದೊಂದು ಮಾಸದಲ್ಲಿ ಗಣಪತಿಯ ಬೇರೆ ಬೇರೆ ಹೆಸರಿನಲ್ಲಿ, ಬೇರೆ ಬೇರೆ ಪೀಠದ ಹೆಸರಿನಲ್ಲಿ ಪೂಜಿಸಬೇಕೆಂದಿದೆ. ಭಾದ್ರಪದ ಮಾಸದಲ್ಲಿ ವಿN°àಶ್ವರ ಪೀಠದಲ್ಲಿ ವಿಘ್ನರಾಜ ಮಹಾಗಣಪತಿಯನ್ನು ಆರಾಧಿಸಬೇಕು.

LEAVE A REPLY

Please enter your comment!
Please enter your name here