ಒಡಿಯೂರು : ಚತುರ್ವೇದ ಗಳಲ್ಲಿಯೂ ಗಣಪತಿ ವಂದ್ಯನಾಗಿದ್ದಾನೆ. ಗ್ ಎಂದರೆ ಋಗ್ವೇದ, ಜ ಎಂದರೆ ಯಜುರ್ವೇದ, ನ ಎಂದರೆ ಸಾಮಗಾನ, ನ ಎಂದರೆ ಅಥರ್ವಣ ವೇದ – ಹೀಗೆ ಅಕ್ಷರ ಗಳು ಗಜಾನನ ಹೆಸರಿನಲ್ಲಿ ಅಡಕವಾಗಿವೆ. ವಿಘ್ನವಿನಾಶಕನಾದ ಗಣನಾಯಕ ಜ್ಞಾನದ ಗಣಿ. ನಾವು ಜ್ಞಾನ ಗಳಿಸಬೇಕೆಂಬುದೇ ಆತನ ಸಂದೇಶ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ಶ್ರೀ ಸಂಸ್ಥಾನ ದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಸಂಪನ್ನಗೊಂಡ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿ ಸಂದರ್ಭ ಸಂದೇಶ ನೀಡಿದರು.