Home ಧಾರ್ಮಿಕ ಸುದ್ದಿ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ: ಸಾಮಾನ್ಯ ಸಭೆ

ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ: ಸಾಮಾನ್ಯ ಸಭೆ

1644
0
SHARE

ಬೆಳ್ತಂಗಡಿ: ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್‌ನಲ್ಲಿ ಜರಗಲಿರುವ ಬ್ರಹ್ಮಕಲಶೋತ್ಸವದ ಕುರಿತು ವಲಯ ಸಮಿತಿಯ ಪ್ರಮುಖರು ಹಾಗೂ ಭಕ್ತರ ಸಮಾ ಲೋಚನ ಸಭೆ ಜ. 20ರಂದು ನಂದನಬಿತ್ತಿಲ್‌ನಲ್ಲಿ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘದ ನಿರ್ದೇಶಕರ ಸಾಮಾನ್ಯ ಸಭೆಯು ಇಲ್ಲಿನ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ನಡೆಯಿತು.

ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್‌ನ ತಾ| ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ ಅವರು ಮಾಹಿತಿ ನೀಡಿದರು. ಸಮಾಲೋಚನ ಸಭೆಗೆ ತಾಲೂಕಿನಿಂದ ಅತಿ ಹೆಚ್ಚು ಭಕ್ತರನ್ನು ಅಲ್ಲಿ ಸೇರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ರಾಜಶ್ರೀ ರಮಣ್‌, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಮೂಡುಕೋಡಿ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಸಂತೋಷ್‌ ಉಪ್ಪಾರು, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here