ಗಂಗೊಳ್ಳಿ: ಮುಸ್ಲಿಂ ಭಾಂದವರಿಂದ ಮಳೆಗಾಗಿ ಹಾಗೂ ಎಲ್ಲ ಕಡೆ ತಲೆದೋರಿರುವ ಬರವನ್ನು ನಿವಾರಿಸುವ ಸಲುವಾಗಿ ಗಂಗೊಳ್ಳಿಯ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಶನಿವಾರ ವಿಶೇಷ ಪ್ರಾರ್ಥನೆ ನಡೆಯಿತು.
ರಾಯ್ ಬರೇಲಿಯಾ ಮದ್ರಸಾ ಝಿಯಾ ಉಲ್ ಉಲೂಮ್ನ ಉಪ ಪ್ರಾಂಶುಪಾಲ ಮೌಲಾನಾ ಅಬ್ದುಲ್ ಸುಭಾನ್ ಸಾಹಬ್ ನದ್ವಿ ಮದನಿ ಅವರು ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಗಂಗೊಳ್ಳಿ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಮುಝಮ್ಮಿಲ್ ಸಾಹಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಮತೀನ್ ಸಾಹಬ್ ಸಿದ್ದಿಕಿ, ಮೋಹಿಯುದ್ದೀನ್ ಜುಮ್ಮಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ವಹಾಬ್ ಸಾಹಬ್ ನದ್ವಿ ಹಾಗೂ ನೂರಾರು ಮಂದಿ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು