Home ಧಾರ್ಮಿಕ ಸುದ್ದಿ ನಿಧಿ ಸಂಗ್ರಹ: ಜ. 7ರಂದು ಭಕ್ತರ ಸಭೆಗೆ ತೀರ್ಮಾನ

ನಿಧಿ ಸಂಗ್ರಹ: ಜ. 7ರಂದು ಭಕ್ತರ ಸಭೆಗೆ ತೀರ್ಮಾನ

1677
0
SHARE

ಪುಂಜಾಲಕಟ್ಟೆ: ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಭೆಯು ಸಮಿತಿಯ ಸಂಚಾಲಕ ಡಾ| ಎಂ. ಮೋಹನ್‌ ಆಳ್ವ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಕ್ಷೇತ್ರದ ಸಭಾಂಗಣದಲ್ಲಿ ಜರಗಿತು.

ಜೀರ್ಣೋದ್ಧಾರ ಕಾರ್ಯದ ಆರಂಭಿಸುವ ದೃಷ್ಟಿಯಿಂದ ನಿಧಿ ಸಂಗ್ರಹದ ಕುರಿತು ಜ. 7ರಂದು ಭಕ್ತರ ಸಭೆ ಕರೆಯಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಗ್ರಾಮಗಳ ಎಲ್ಲ ಮನೆಗಳ ಭಕ್ತರು ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಲು ಡಾ| ಮೋಹನ್‌ ಆಳ್ವ ಸಲಹೆ ನೀಡಿದರು.

ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಮಾತನಾಡಿ, ನೂತನ ದೇಗುಲ ನಿರ್ಮಾಣದ ಕುರಿತು ವಾಸ್ತುಶಿಲ್ಪಿಗಳ ಜತೆ ಚರ್ಚಿಸಿ, ಶೀಘ್ರ ರೂಪುರೇಖೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
ಅಧ್ಯಕ್ಷ ಎಂ.ಎಸ್‌. ಶೆಟ್ಟಿ ಸರಪಾಡಿ ಮಾತನಾಡಿ, ಹೆಚ್ಚಿನ ಧನ ಸಂಗ್ರಹದ ಕುರಿತು ಕ್ಷೇತ್ರಕ್ಕೆ ಸಂಬಂಧಪಟ್ಟ ಪರವೂರಿನವರನ್ನು ಸಂಪರ್ಕಿಸುವ ಕುರಿತು ತಿಳಿಸಿದರು.

ಎ. 19ರ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ ಮೊದಲಾದ ವಿಚಾರಗಳ ಕುರಿತು ಚರ್ಚಿಸಲಾಯಿತು. ಕ್ಷೇತ್ರದ ಆಡಳಿತ ಮಂಡಳಿಯ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸೂಕ್ತ ಸಲಹೆ-ಸೂಚನೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಎಸ್‌., ಪುರೋಹಿತ ವಿಜಯಕೃಷ್ಣ ಐತಾಳ್‌ ಪೂಂಜೂರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್‌. ಸ್ವಾಗತಿಸಿ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here