Home ಧಾರ್ಮಿಕ ಸುದ್ದಿ ಶಂಭೂರು ದಕ್ಷಿಣದ ಶ್ರೀ ಶಿರ್ಡಿ ಸಾಯಿ ಮಂದಿರಕ್ಕೆ ಶಿಲಾನ್ಯಾಸ

ಶಂಭೂರು ದಕ್ಷಿಣದ ಶ್ರೀ ಶಿರ್ಡಿ ಸಾಯಿ ಮಂದಿರಕ್ಕೆ ಶಿಲಾನ್ಯಾಸ

ಧರ್ಮ-ಸಂಸ್ಕೃತಿಯಿಂದ ಸಂಸ್ಕರಯುತ ಸಮಾಜ: ಒಡಿಯೂರು ಶ್ರೀ

1871
0
SHARE

ಬಂಟ್ವಾಳ: ಧರ್ಮ-ಸಂಸ್ಕೃತಿ ಒಂದೇ ನಾಣ್ಯದ 2 ಮುಖಗಳು. ಅವು ಒಟ್ಟಾಗಿ ಹೋದಾಗ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ. ದೇಶ ಉಳಿಯ
ಬೇಕಾದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಜೂ. 20ರಂದು ಶಂಭೂರು ಗ್ರಾಮದ ಬೈಪಾಡಿಯಲ್ಲಿ ನೂತನ ದಕ್ಷಿಣದ ಶ್ರೀ ಶಿರ್ಡಿ ಸಾಯಿ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಸಾಯಿ ಟ್ರಸ್ಟ್‌ ಅಧ್ಯಕ್ಷ ಸೂರಜ್‌ ಕುಮಾರ್‌, ಶಿರ್ಡಿ ಸಾಯಿ ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ ಗುರೂಜಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ರಾ.ಸ್ವ.ಸೇ. ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿ, ಇಲ್ಲಿನ ಶಿರ್ಡಿ ಮಂದಿರ ಜೀವನ ಮೌಲ್ಯವನ್ನು ಉಳಿಸಿ-ಬೆಳೆಸುವ ಕೇಂದ್ರವಾಗಿ ಮೂಡಿ ಬರಲಿ ಎಂದು ಹಾರೈಸಿದರು.

ನರಿಕೊಂಬು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ದನ ಭಟ್‌ ಮಾತನಾಡಿ, ಜಿಲ್ಲೆಗೆ ಹೊಸದಾಗಿರುವ ಶಿರ್ಡಿ ಮಂದಿರವನ್ನು ರೂಪಿಸುವ ಮೂಲಕ
ಜನರಿಗೆ ಅಲ್ಲಿನ ಗುರುವಿನ ಆಶೀರ್ವಾದ ಸಿಗುವಂತೆ ಮಾಡಿದ ಸಂಘಟಕರ ಕೆಲಸ ಶ್ಲಾಘನೀಯ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ದೇವತ್ವದ ಕಾರ್ಯಶೈಲಿಯಿಂದ ಶಿರ್ಡಿ ಸಾಯಿಬಾಬಾ ದೇವರಾಗಿ ಪೂಜಿಸಲ್ಪಟ್ಟರು. ಅನೇಕ ದಾರ್ಶನಿಕರು ಸರ್ವರನ್ನು ಪ್ರೀತಿ ಮಾಡಿದವರು ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ಮಾತನಾಡಿ, ಭಾರತಕ್ಕೆ ಯಾವುದೇ ಜಾತಿ ಇಲ್ಲ. ಇಲ್ಲಿ ಮನುಷ್ಯ ಮಾಧವನಾಗಬಲ್ಲ ಎಂದರು. ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು, ಸಂತೋಷ್‌ ಕುಮಾರ್‌ ಬೋಲಿಯಾರ್‌, ಲೀಲಾಕ್ಷ ಬಿ. ಕರ್ಕೇರ, ಸತ್ಯಜಿತ್‌ ಸುರತ್ಕಲ್‌, ಕೇಶವ ಶಾಂತಿ, ನ್ಯಾಯವಾದಿ ಪ್ರಶಾಂತ್‌ ಪೂಜಾರಿ ಎ., ಪ್ರಗತಿಪರ ಕೃಷಿಕ ಎನ್‌. ಪ್ರಕಾಶ್‌ ಕಾರಂತ, ಚಂದ್ರಶೇಖರ ಗುರೂಜಿ ಮಾತನಾಡಿದರು. ಗಾಯತ್ರಿ ರವೀಂದ್ರ ಸಪಲ್ಯ, ಕೆ. ಅಶ್ವಿ‌ನ್‌ ರಾವ್‌, ಆನಂದ ಎ. ಶಂಭೂರು ಮತ್ತಿತರರಿದ್ದರು. ಟ್ರಸ್ಟಿ ಸತ್ಯ ಪ್ರಸ್ತಾವಿಸಿದರು. ಜಗದೀಶ್‌ ಕುಂದರ್‌ ಶಂಭೂರು ಸ್ವಾಗತಿಸಿ, ಶೋಭಾ ಶೆಟ್ಟಿ ವಂದಿಸಿದರು. ದಿನೇಶ್‌ ಸುವರ್ಣ ಕುದ್ಕೋಳಿ ನಿರೂಪಿಸಿದರು.

ಪೂರ್ಣತ್ವ
ಶಿರ್ಡಿ ಎಂದರೆ ಪರಿಪೂರ್ಣ ದೇಹದ ಕಲ್ಪನೆಯಾಗಿದೆ. ಅದು ಪೂರ್ಣತ್ವ ಹೊಂದಿರುವ ಸಂಕೇತ. ಮೋಹ ಮತ್ತು ಪ್ರೀತಿಯನ್ನು ನಾವು ಅನೇಕ ಸಂದರ್ಭಗಳಲ್ಲಿ ತಪ್ಪಾಗಿ ಅರ್ಥ
ಮಾಡುತ್ತೇವೆ. ಮೋಹದಿಂದ ಬಯಕೆ ಸೃಷ್ಟಿ ಆಗುವುದು.
– ಗುರುದೇವಾನಂದ ಶ್ರೀ
ಒಡಿಯೂರು

LEAVE A REPLY

Please enter your comment!
Please enter your name here