ಮಹಾನಗರ: ಕೆನರಾ ಹೆಮ್ಮಕ್ಕಳ ಪ್ರೌಢಶಾಲಾ ವಠಾರದ ಶ್ರೀ ಸುಧೀಂದ್ರ ಸಭಾಗೃಹದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಮಕರ ಸಂಕ್ರಾಂತಿ ಪ್ರಯುಕ್ತ ‘ಫೂಲ್ ಕುಂಕುಮ್’ ಕಾರ್ಯಕ್ರಮ ಜರಗಿತು. ಜ್ಯೋತಿಪ್ರಭಾ ಎಸ್. ರಾವ್ ಕಾಸರಗೋಡು ಉದ್ಘಾಟಿಸಿ, ಹೂವು ಮತ್ತು ಕುಂಕುಮವು ಮಹಿಳೆಯರಿಗೆ ಅತ್ಯಂತ ಪವಿತ್ರ ಎಂದರು.
ಪ್ರವಚನ, ಸಮ್ಮಾನ
ಮಂಗಳೂರು ವಿಠೊಭ ದೇವಸ್ಥಾನದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಅವರು ಮಕರ ಸಂಕ್ರಾಂತಿ ಕುರಿತಂತೆ ಪ್ರವಚನ ನೀಡಿದರು. 2018ರಲ್ಲಿ ನಡೆದ ಕೊಂಕಣಿ ಎಂ.ಎ. ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಮೇಧಾ ಕಾಮತ್ ಅವರನ್ನು ಕೊಂಕಣಿ ಸಾಂಸ್ಕೃತಿಕ ಸಂಘದ ಪರವಾಗಿ ಸಮ್ಮಾನಿಸಲಾಯಿತು.
ಉಪಾಧ್ಯಕ್ಷೆ ಕಸ್ತೂರಿ ಕಾಮತ್, ಮಮತಾ ಕಾಮತ್, ಪ್ರಭಾ ಭಟ್, ಖಜಾಂಚಿ ಸುಮಾ ಪಂಡಿತ್, ಜಯಾ ಪೈ ಹಾಗೂ ಸಂಘದ ಇತರ ಮಹಿಳಾ ಸದಸ್ಯರಿಂದ ಮುಖ್ಯ ಅತಿಥಿ ಜ್ಯೋತಿಪ್ರಭಾ ಎಸ್. ರಾವ್ ಅವರಿಗೆ ಬಾಗೀನ ನೀಡಿ ಗೌರವಿಸಲಾಯಿತು. ಅಧ್ಯಕ್ಷ ವಿಟuಲ್ ಕುಡ್ವ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಶೆಣೈ ವಂದಿಸಿದರು. ಮಾಜಿ ಅಧ್ಯಕ್ಷ ರತ್ನಾಕರ ಕುಡ್ವ ನಿರ್ವಹಿಸಿದರು. ಪ್ರತಿಮಾ ನಾಯಕ್ ಕಾರ್ಯಕ್ರಮ ಸಂಯೋಜಿಸಿದರು.