Home ನಂಬಿಕೆ ಸುತ್ತಮುತ್ತ 5 ವ್ರತಗಳ ಮಹತ್ವವೇನು ?

5 ವ್ರತಗಳ ಮಹತ್ವವೇನು ?

561
0
SHARE

ನಿರ್ದಿಷ್ಟವಾದ ದೇವರ ಆರಾಧನೆಯನ್ನು ಸಂಕಲ್ಪ ಮಾಡಿ ನಿರಂತರವಾಗಿ ನಿಯಮ ನಿಷ್ಠೆಗಳಿಂದ ನಿಗದಿತವಾದ ಸಮಯದಲ್ಲಿ ಮಾಡುವುದು ವ್ರತವೆನಿಸುತ್ತದೆ. ಹೆಚ್ಚಿನೆಲ್ಲ ವ್ರತಗಳು ಪುರಾಣೋಕ್ತ. ಆದರೆ  ನೂತನ ವ್ರತಾಚರಣೆಗಳೂ ಇತ್ತೀಚೆಗೆ ಕಂಡುಬರುತ್ತಿವೆ. ಉಪವಾಸ ಧ್ಯಾನ ಜಪ ಕಠಿಣವಾದ ನಿಯಮಗಳ ಸಹಿತ ಪರಮಾತ್ಮನ ಆರಾಧನೆ ವ್ರತದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಶ್ರೀ ಸತ್ಯ ನಾರಾಯಣ ವ್ರತ , ಶ್ರೀ ಸಂಕಷ್ಟಹರ ಗಣಪತಿ ವ್ರತ, ವರಮಹಾಲಕ್ಷ್ಮಿ ವ್ರತ ಮುಂತಾದ ವಿರಾಟಗಳ ಜತೆಗೆ ಕ್ಷೇತ್ರದರ್ಶನಕ್ಕೆ ತೆರಳುವಾಗಲೂ ವ್ರತಗಳನ್ನು ಕೈ ಗೊಳ್ಳುತ್ತಾರೆ. ಶಬರಿಮಲೆ ಶ್ರೀ ಕ್ಷೇತ್ರಕ್ಕೆ ತೆರಳುವಾಗ ಮಳೆ ಹಾಕಿ ವ್ರತಧಾರಣೆ ಮಾಡುವುದು ಪ್ರಸಿದ್ದವಾಗಿದೆ.

ವೇದೋಪನಿಷತ್ಗಳಲ್ಲಿ ವ್ರತ ಎಂಬ ಪದದ ಉಲ್ಲೇಖ ಹಲವು ಬಾರಿ ಬರುವುದ್ರಿಂದ ಆ ಕಾಲದಲ್ಲೂ ವ್ರತದ ಇರುವಿಕೆ ಕಂಡುಬರುತ್ತದೆ. ವ್ರತಗಳಲ್ಲಿ ಸಾಮಾನ್ಯಕ್ಕಿಂತ ವಿಶೇಷ ನಿಯಮಗಳು, ವಿಶಿಷ್ಟ ಉಪಾಸನಾ ಕ್ರಮಗಳು ಕಂಡುಬರುತ್ತವೆ. ಆಹಾರದ ಕುರಿತೂ ಎಚ್ಚರಿಕೆ ಇರುತ್ತದೆ. ಸಾತ್ವಿಕ ಆಹಾರಸೇವನೆ. ವರ್ಜ್ಯ ಆಹಾರಗಳು ನಿರ್ದಿಷ್ಟ ಸಮಯದಲ್ಲಿ ಆಹಾರಸೇವನೆ ಇತ್ಯಾದಿಗಳು ವ್ರತಸಂಬಂಧಿ ಆಹಾರಾನಿಯಮಗಳಲ್ಲಿ ಸೇರುತ್ತವೆ. ಇತ್ತೀಚೆಗೆ ತಮ್ಮ ಶ್ರೀಮಂತಿಕೆಯ ಪ್ರದರ್ಶನಕ್ಕೋ, ಕೇವಲ ಆಡಂಬರಕ್ಕೋ ವ್ರತ ಆಚರಿಸುವುದು ಕಾಣಬರುತ್ತದೆ. ಒಂದು ವಿಶಿಷ್ಟ ಚೋಕಟ್ಟಿಗೆ ಬದ್ಧರಾಗಿ ಆರಾಧನೆ ಮಾಡಿದಾಗ ಅದರಲ್ಲಿ ಪೂರ್ತಿ ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎನ್ನುವುದು ವ್ರತದ ವಿಶೇಷ. ಇದರಲ್ಲಿ ನಾಮಸ್ಮರಣೆ, ಮಂತ್ರಪಠಣ, ಉಪವಾಸ ಧ್ಯಾನ, ಶರೀರಶುದ್ಧಿ ಮಣೇಶುದ್ಧಿ ಇವೇ ಪ್ರಮುಖ.

 

LEAVE A REPLY

Please enter your comment!
Please enter your name here