ಮಲ್ಪೆ: ತೊಟ್ಟಂ ಶ್ರೀ ಪಂಡರೀನಾಥ ಭಕ್ತಿ ಉದಯ ಭಜನ ಮಂದಿರದ ನೂತನ ಜ್ಞಾನ ಮಂದಿರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ರೂ. ಆರ್ಥಿಕ ನೆರವನ್ನು ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಅವರು ಶನಿವಾರ ಭಜನ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಯತಿರಾಜ್ ಸಾಲ್ಯಾನ್ ಆವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು. ಅಧ್ಯಕ್ಷ ಸುಂದರ ಜಿ. ಕುಂದರ್, ಮಾತೃ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಗಣೇಶ್, ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್., ಮಲ್ಪೆ ವಲಯ ಮೇಲ್ವಿಚಾರಕ ವಸಂತ ಎಸ್. ದೇವಾಡಿಗ, ಮಲ್ಪೆ ಸೇವಾ ಪ್ರತಿನಿಧಿ ವಿಜಯ ಆರ್. ಪೈ., ಮಲ್ಪೆ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.