Home ಧಾರ್ಮಿಕ ಸುದ್ದಿ ಫೆ. 5 – 11: ಐವರ್ನಾಡು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ಫೆ. 5 – 11: ಐವರ್ನಾಡು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

1399
0
SHARE

ಸುಳ್ಯ: ಸುಳ್ಯ ತಾ|ನ ಇತಿಹಾಸ ಪ್ರಸಿದ್ಧ ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮತ್ತು ವಾರ್ಷಿಕ ಜಾತ್ರೆ ಫೆ. 5ರಿಂದ 11ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ.

ಫೆ. 5ರಂದು ಪೂರ್ವಾಹ್ನ ಊರ ಭಕ್ತಾಧಿಗಳಿಂದ ಹಸಿರುವಾಣಿ ಸಮರ್ಪಣೆ, ಉಗ್ರಾಣ ಮುಹೂರ್ತ, ಸಂಜೆ ಕ್ಷೇತ್ರದ ತಂತ್ರಿಗಳಿಗೆ ಸ್ವಾಗತದೊಂದಿಗೆ ಬ್ರಹ್ಮಕಲಶ ವಿಧಿ ವಿಧಾನಗಳು ಆರಂಭಗೊಳ್ಳುತ್ತದೆ. ಸಂಜೆ ಒಡಿಯೂರು ಶ್ರೀಗಳವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಶಾಸಕ ಎಸ್‌.ಅಂಗಾರ ಉಪಸ್ಥಿತರಿರುತ್ತಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಫೆ. 6ರಂದು ಸಂಜೆ 7ಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸ್ಥಳೀಯ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ಆದ ಬಳಿಕ ವಿಠಲ ನಾಯಕ್‌ ಬಳಗದವರಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ.

ಫೆ. 7ರಂದು ಸಂಜೆ 8ಕ್ಕೆ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷ ಬಳಗದವರಿಂದ ತಾಳಮದ್ದಲೆ ನಡೆಯಲಿದೆ. ಆನಂತರ ಐವರ್ನಾಡು ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಫೆ. 8ರಂದು ಸಂಜೆ 7ಕ್ಕೆ ವಜ್ರದೇಹಿ ಮಠದ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಬಾಲಕೃಷ್ಣ ಮಾಸ್ತರ್‌ ಮಂಜೇಶ್ವರ ಇವರ ಶಿಷ್ಯರಿಂದ ನೃತ್ಯಾರಾಧನಂ ನಡೆಯಲಿದೆ. ಫೆ. 9ರಂದು ಸಂಜೆ 8ಕ್ಕೆ ಖಂಡಿಗೆಮೂಲೆ ಯಕ್ಷಸಿರಿ ಕಲಾ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಲಿದೆ.

ಅಷ್ಟಬಂಧ ಬ್ರಹ್ಮಕಲಶಾಭಿಷೇಕ

ಫೆ. 10ರಂದು ಪೂರ್ವಾಹ್ನ 8.30ರಿಂದ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾ ಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಕಲಶಾಭಿಷೇಕ, ತಂಬಿಲ ಸೇವೆ ನಡೆಯಲಿದೆ. ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ದೇವರ ಉತ್ಸವ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಲಿದೆ. ರಾತ್ರಿ ಗಂಟೆ 8ಕ್ಕೆ ಸುಳ್ಯದ ಶ್ರೀ ಶಾರದಾ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಫೆ. 11ರಂದು ಬೆಳಗ್ಗೆ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕಲಶಾಭಿಷೇಕ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪಟ್ಲ ಸತೀಶ್‌ ಶೆಟ್ಟಿ ಬಳಗದವರಿಂದ ನೃತ್ಯ ಗಾನ ವೈಭವ. ರಾತ್ರಿ ದೈವಗಳ ನಡಾವಳಿಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಒಂದೇ ಪಾಣಿಪೀಠದಲ್ಲಿ ಐದು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಪಂಚಲಿಂಗೇಶ್ವರನೆಂದು ಶಿವನನ್ನು ಆರಾಧಿಸುವ ಪದ್ಧತಿ ತುಳುನಾಡಿನ ಸಂಪ್ರದಾಯಗಳ ಲ್ಲೊಂದಾಗಿದೆ. ವಾಮದೇವ, ಅಘೋರ, ತತ್ಪರುಷ, ಸದ್ಯೋಜಾತ ಹಾಗೂ ಈಶಾನ ಎಂಬ ಶಿವನ ಪಂಚರೂಪಗಳನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಆರಾಧನಾ ಕ್ಷೇತ್ರ ಕಾರ್ನಿಕದ ಪಂಚಲಿಂಗೇಶ್ವರ ದೇವಾಲಯ ಸುಳ್ಯ ತಾಲೂಕಿನ ಐವರ್ನಾಡಿ ನಲ್ಲಿದೆ.ಪಾಂಡವರು ತಮ್ಮ ವನ ವಾಸದ ಸಂದರ್ಭ ಈ ಊರಿನಲ್ಲಿ ತಂಗಿದ್ದು, ಅನುದಿನವೂ ಪರಮೇಶ್ವರನನ್ನು ಪೂಜಿಸಲು ಪಯಸ್ವಿನಿನದಿಯಿಂದ ಒಂದೊಂದುಲಿಂಗವನ್ನು ತಂದಿದ್ದರು. ಆದಿಶಕ್ತಿಯ ಮತ್ತೂಂದು ರೂಪವಾದ ರಕ್ತೇಶ್ವರಿಯೂ ಲಿಂಗಾನುವರ್ತಿ ಯಾಗಿ ಜತೆಗೆ ಬಂದಿದ್ದಳು. ಪಾಂಡವರು ಉಳಿದಿದ್ದ ಸ್ಥಳಕ್ಕೆ ಪಾಂಡವರ ಪಣೆ ಹಾಗೂ ಅವರು ಉಪಯೋಗಿಸುತ್ತಿದ್ದ ಕೆರೆ ಪಾಂಡವರ ಕೆರೆ ಎಂದೇ ಈಗಲೂ ಹೆಸರಿದೆ. ಐವರು ಪಾಂಡವರು ಇದ್ದ ಈ ನಾಡನ್ನು ಐವರನಾಡು ಮುಂದೆ ಐವರ್ನಾಡು ಆಯಿತು ಎಂಬ ಕತೆಯೂ ಇದೆ.

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ

LEAVE A REPLY

Please enter your comment!
Please enter your name here