Home ಧಾರ್ಮಿಕ ಸುದ್ದಿ ಫೆ.13: ಶ್ರೀಕ್ಷೇತ್ರ ಅಡಪಾಡಿಯಲ್ಲಿ ಮಹಾಶಿವರಾತ್ರಿ ; ಪೌಳಿ ಲೋಕಾರ್ಪಣೆ

ಫೆ.13: ಶ್ರೀಕ್ಷೇತ್ರ ಅಡಪಾಡಿಯಲ್ಲಿ ಮಹಾಶಿವರಾತ್ರಿ ; ಪೌಳಿ ಲೋಕಾರ್ಪಣೆ

540
0
SHARE

ಬೆಳ್ಮಣ್‌ : ಕಾರ್ಕಳ ತಾಲೂಕಿನ ಪಳ್ಳಿ ಶ್ರೀಕ್ಷೇತ್ರ ಅಡಪಾಡಿಯ ಕಾರಣಿಕ ಸಾನ್ನಿಧ್ಯ ಹೊಂದಿರುವ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರೀ ದೇವೀ ಸನ್ನಿಧಿಯಲ್ಲಿ ಶ್ರೀ ಮಹಾಶಿವರಾತ್ರಿ ಮಹೋತ್ಸವ ಫೆ. 13ರಂದು ನಡೆಯಲಿದೆ.

ಬೆಳಗ್ಗೆ ಧಾರ್ಮಿಕ ಅನುಷ್ಠಾನಗಳು, ಧ್ವಜಾರೋಹಣ, ನವಕ ಪ್ರಧಾನಹೋಮ, ಲಘುರುದ್ರ ಅಭಿಷೇಕ, ನವಕ ಕಲಶಾಭಿಷೇಕ, ಲಘುರುದ್ರ ಯಾಗ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಜತ ಪಲ್ಲಕಿ ಉತ್ಸವ, ಪಲ್ಲಪೂಜೆ, ವಸಂತಪೂಜೆ, ದರ್ಶನಸೇವೆ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 7.00ಕ್ಕೆ ಕಲ್ಪೋಕ್ತ ಪೂಜೆ,ರಾತ್ರಿ ಗಂಟೆ 8.00 ದೇವರ ಮಹಾಬಲಿ ಉತ್ಸವ, ಭೋಜನ ಪ್ರಸಾದ, ರಾತ್ರಿ 11.00ಕ್ಕೆ ಧರ್ಮದೆ„ವಗಳ ನೇಮ ಸಂಪನ್ನಗೊಳ್ಳಲಿದೆ.

ಶಿಲಾಮಯ ಓಲಗ ಮಂಟಪ-ದಕ್ಷಿಣ ಭಾಗದ ವಿಶಾಲ ಪೌಳಿ ಲೋಕಾರ್ಪಣೆ
ಶ್ರೀಕ್ಷೇತ್ರದ ವಾಸ್ತುತಜ್ಞ ಕುಡುಪು ಕೃಷ್ಣರಾಜ ತಂತ್ರಿ ಇವರ ಮಾರ್ಗದರ್ಶನದಲ್ಲಿ ಖ್ಯಾತ ಶಿಲ್ಪಿ ಕುಪ್ಪುಸ್ವಾಮಿ ಕಾರ್ಕಳ ಇವರಿಂದ ಆಕರ್ಷಕ ಶೈಲಿಯ ಕೆತ್ತನೆಗಳಿಂದ ಕೂಡಿದ ಶಿಲಾಮಯ ಓಲಗ ಮಂಟಪ ಮತ್ತು ಶ್ರೀಕ್ಷೇತ್ರದ ದಕ್ಷಿಣ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಪೌಳಿ ಲೋಕಾರ್ಪಣೆಗೊಳ್ಳಲಿದೆ. ಖ್ಯಾತ ದಾರುಶಿಲ್ಪಿ ಉಡುಪಿ ನಾರಾಯಣ ಆಚಾರ್ಯ ಅವರಿಂದ ಮರದ ಕಾಮಗಾರಿ ಪೂರ್ಣಗೊಂಡಿದೆ. ಇದು 262 ಅಡಿ ಉದ್ದವಿದ್ದು ಕರಾವಳಿ ಕರ್ನಾಟಕದ ದೇಗುಲಗಳಲ್ಲಿಯೇ ಅತ್ಯಂತ ಉದ್ದವಾಗಿರುವ ಪೌಳಿಯಾಗಿದೆ. ಶ್ರೀಕ್ಷೇತ್ರದ ಆಕರ್ಷಣೆಯ ಭಾಗವಾಗಿ ಭಗವದ್ಭಕ್ತರ ಕಣ್ಮನ ಸೆಳೆದಿದ್ದು ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ಎರಡೂ ವಿನ್ಯಾಸಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here