Home ಧಾರ್ಮಿಕ ಕಾರ್ಯಕ್ರಮ ಕ್ರೈಸ್ತರಿಂದ ಗರಿಗಳ ರವಿವಾರ ಆಚರಣೆ

ಕ್ರೈಸ್ತರಿಂದ ಗರಿಗಳ ರವಿವಾರ ಆಚರಣೆ

1680
0
SHARE

ಮಹಾನಗರ: ಕ್ರೈಸ್ತರು ಮಾ. 25ರಂದು ಗರಿಗಳ ರವಿವಾರ‌ (ಪಾಮ್‌ ಸಂಡೇ)ಯನ್ನು ಆಚರಿಸಿದರು. ಆ ಪ್ರಯುಕ್ತ ಕ್ರೈಸ್ತ ದೇವಾಲಯಗಳಲ್ಲಿ ತೆಂಗಿನ ಗರಿಗಳನ್ನು ಹಿಡಿದು ಪ್ರಾರ್ಥನೆ ಸಲ್ಲಿಸಿದರು.

ಮಂಗಳೂರಿನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ ಡಿ’ಸೋಜಾ ಅವರು ಸುಳ್ಯ ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.  ಮಂಗಳೂರಿನ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಆಯಾ ಚರ್ಚ್‌ಗಳಲ್ಲಿ ಧರ್ಮ ಗುರುಗಳ ನೇತೃತ್ವದಲ್ಲಿ ಬಲಿ ಪೂಜೆಗಳು ಜರಗಿದವು.

ಹಿನ್ನೆಲೆ
ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು “ಒಲಿವ್‌’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ, ಬರ ಮಾಡಿಕೊಂಡಿದ್ದರು ಎಂಬ ಉಲ್ಲೇಖ ಬೈಬಲ್‌ನಲ್ಲಿದ್ದು, ಅದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ರವಿವಾರದ ಬಲಿ ಪೂಜೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here