ಕುಂದಾಪುರ : ಕೋಡಿಯ ಶ್ರೀ ಚಕ್ರಮ್ಮ ದೇವಸ್ಥಾನದ ವಾರ್ಷಿಕ ಕೆಂಡ ಸೇವೆ ಜಾತ್ರೆ ಫೆ. 7 ಹಾಗೂ 8ರಂದು ನಡೆಯಲಿದೆ.
ಫೆ. 7ರಂದು ಸಂಜೆ ಗಂಟೆ 4ರಿಂದ ಮಂಗಳಾರತಿ, ಕುಂಕುಮಾರ್ಚನೆ, ಮಹಾ ಮಂಗಳಾರತಿ ಹೂವಿನ ಪೂಜೆ, ದರ್ಶನ, ಕೆಂಡ ತುಳಿವ ಸೇವೆ ಹಾಗೂ ಅನ್ನಸಂತರ್ಪಣೆ, ರಾತ್ರಿ ಗಂಟೆ 10ರಿಂದ ಚಕ್ರೇಶ್ವರೀ ಯುವಕ ಮಂಡಲದ ಸದಸ್ಯರ ಸಹಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಂದಾಪುರದ ರೂಪಕಲಾ ತಂಡದಿಂದ ಸಾಮಾಜಿಕ ಹಾಸ್ಯ ನಾಟಕ, ಫೆ. 8ರಂದು ಮುಂಜಾನೆ 5.30ರಿಂದ 8.30ರ ವರೆಗೆ ದರ್ಶನ, ಢಕ್ಕೆಮಂಡಲ, ಬಾಳೆಗೊನೆ, ಹಾಲು ಸೇವೆ ಮೈದಾಳಿ ದೇವಿಗೆ, ಬೆಳಗ್ಗೆ ಗಂಟೆ 8.30ರಿಂದ 12.30ರ ವರೆಗೆ ಹಣ್ಣುಕಾಯಿ, ತನುಸೇವೆ, ಹೂವಿನ ಪೂಜೆ, ಮಹಾಮಂಗಳಾರತಿ, ಉಡಿ ತುಂಬಿಸುವ ಸೇವೆ, ಗಂಟೆ 12.30ರಿಂದ 2.30ರ ವರೆಗೆ ದರ್ಶನ, ತುಲಾಭಾರ ಸೇವೆ ಮತ್ತು ಅನ್ನ ಸಂತರ್ಪಣೆ, ರಾತ್ರಿ ಗಂಟೆ 9.30 ಕ್ಕೆ ಮಾರಣಕಟ್ಟೆ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.