Home ಧಾರ್ಮಿಕ ಸುದ್ದಿ ಫೆ. 3: ಪರ್ಪುಂಜ ರಾಮಜಾಲು ಗರಡಿಯಲ್ಲಿ ನೇಮ

ಫೆ. 3: ಪರ್ಪುಂಜ ರಾಮಜಾಲು ಗರಡಿಯಲ್ಲಿ ನೇಮ

529
0
SHARE

ಪುತ್ತೂರು : ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನೇಮ ಹಾಗೂ 10ನೇ ವರ್ಷದ ದಶಮಾನೋತ್ಸವ ಸಂಭ್ರಮ ಫೆ. 3ರಂದು ನಡೆಯಲಿದೆ.

ಬೆಳಗ್ಗೆ ಗಣಪತಿ ಹೋಮ, ನಾಗದೇವರ ತಂಬಿಲ, ಶ್ರೀ ಬ್ರಹ್ಮದೇವರ ತಂಬಿಲ, ನಾಗದೇವರಿಗೆ ಆಶ್ಲೇಷ ಬಲಿಪೂಜೆ, ಕೋಟಿ- ಚೆನ್ನಯರಿಗೆ ಕಲಶಾಭಿಷೇಕ ಹಾಗೂ ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಭಂಡಾರ ತೆಗೆದು ಬಳಿಕ ಸಭಾ ಕಾರ್ಯಕ್ರಮ ದಶಮಾನೋತ್ಸವ ಸಂಭ್ರಮ ನಡೆಯಲಿದೆ.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ರಾಮಜಾಲು ಗರಡಿ ಆಡಳಿತ ಮೊಕ್ತೇಸರ ಕೆ. ಸಂಜೀವ ಪೂಜಾರಿ ಕೂರೇಲು ಕಾರ್ಯಕ್ರಮ ಉದ್ಘಾಟಿಸುವರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ, ಉದ್ಯಮಿ ಜಯಂತ ನಡುಬೈಲು ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ| ಗಣೇಶ್‌ ಅಮೀನ್‌ ಸಂಕಮಾರ್‌ ಧಾರ್ಮಿಕ ಉಪನ್ಯಾಸ ನೀಡುವರು.

ಡಾ| ಪ್ರಸಾದ್‌ ಎಂ.ಕೆ., ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಮೂಡುಬಿದರೆ ಕಾಲೇಜಿನ ಪ್ರಾಧ್ಯಾಪಕ ಡಾ| ನವೀನ್‌ ಮರಿಕೆ, ನಾರಾಯಣ ಪೂಜಾರಿ ಬಂಬ್ರಾಣ ಕೊಟ್ಯದ ಮನೆ, ಕುಂಞ ನಾಯ್ಕ ಮೆಲ್ಮಜಲು ಆರ್ಯಾಪು ಭಾಗವಹಿಸುವರು. ಬಳಿಕ ಅನ್ನಸಂತರ್ಪಣೆ ಜರಗಲಿದೆ.

ಬೈದೇರುಗಳ ಗರಡಿ ಇಳಿಯುವುದು, ಆಕರ್ಷಕ ಸುಡುಮದ್ದು ಪ್ರದರ್ಶನ, ಬೈದೇರುಗಳು ಮೀಸೆ ಧರಿಸುವುದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ‘ಅಂಚಗೆ ಇಂಚಗೆ’ ಹಾಸ್ಯಮಯ
ನಾಟಕ ಜರಗಲಿದೆ. ಮಾಯಂದಾಲೆ ಗರಡಿ ಇಳಿಯುವುದು, ಫೆ. 4ರ ಮುಂಜಾನೆ ಕೋಟಿ ಚೆನ್ನಯ್ಯ ದರ್ಶನ ಪಾತ್ರಿಗಳ ಸೇಟ್‌ (ಸುರ್ಯ ಹಾಕಿಕೊಳ್ಳುವುದು), ಬೈದೇರುಗಳ ಸೇಟ್‌
ನಡೆಯಲಿದೆ. ಅರುಣೋದಯ ಹೊತ್ತಿನಲ್ಲಿ ನೇಮದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆ ನಡೆಯಲಿದೆ ಎಂದು ಗರಡಿ ಆಡಳಿತ ಮೊಕ್ತೇಸರ ಕೆ. ಸಂಜೀವ ಪೂಜಾರಿ ಕೂರೇಲು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here