ಕಾಪು: ಅತ್ಯಂತ ಕಾರಣಿಕದ ಕ್ಷೇತ್ರವೆಂದು ಪ್ರತೀತಿಯಲ್ಲಿರುವ ಸುಮಾರು 2,200 ವರ್ಷಗಳ ಇತಿಹಾಸವಿದೆಯೆಂದು ಅಂದಾಜಿಸಲಾಗಿರುವ ಮಟ್ಟಾರ್
ಶ್ರೀ ಬಬ್ಬರ್ಯ ದೆ„ವಸ್ಥಾನದ ವಾರ್ಷಿಕ ನೇಮವು ಫೆ. 18ರಂದು ಧ್ವಜಾರೋಹಣದೊಂದಿಗೆ ಆರಂಭ ಗೊಂಡಿದ್ದು ಫೆ. 26ರವರೆಗೆ ನಡೆಯಲಿದೆ.
ವಾರ್ಷಿಕ ನೇಮೋತ್ಸವದ ಪ್ರಯುಕ್ತ ಫೆ. 25ರಂದು ಮಧ್ಯಾಹ್ನ ದರ್ಶನ ಸೇವೆ, ಮಹಾ ಅನ್ನಸಂತರ್ಪಣೆ, ರಾತ್ರಿ ನೇಮೋತ್ಸವ ಜರಗಲಿದೆ. ಫೆ.26ರಂದು ಧ್ವಜಾವರೋಹಣ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಕಾರ್ಯದರ್ಶಿ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.