Home ಧಾರ್ಮಿಕ ಸುದ್ದಿ ಫೆ. 23: ಕಾರ್ಕಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಫೆ. 23: ಕಾರ್ಕಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

1396
0
SHARE
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಜ್ಜುಗೊಂಡ ಸ್ವಾಗತ ಗೋಪುರ.

ಕಾರ್ಕಳ: ತಿರುಮಲ ತಿರುಪತಿ ದೇವಸ್ಥಾನ (ಟಿ.ಟಿ.ಡಿ), ತಿರುಪತಿ ಇವರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವು ಕಾರ್ಕಳದ ಪುಲ್ಕೇರಿಯ ಶ್ರೀ ಲಕ್ಷ್ಮೀದೇವಿ ಕಲ್ಯಾಣ ಮಂಟಪದ ವಠಾರದಲ್ಲಿ ಫೆ. 23 ಸಂಜೆ 6 ಗಂಟೆಯಿಂದ ನೆರವೇರಲಿದೆ.

ಮಧ್ಯಾಹ್ನ ತಿರುಮಲ ತಿರುಪತಿ ದೇವರನ್ನು ಕಾರ್ಕಳದ ಶ್ರೀ ವೆಂಕಟರಮಣ ದೇವಳಕ್ಕೆ ಕರೆತಂದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂಜೆ 5 ಗಂಟೆಗೆ ದೇವರನ್ನು ಕಲ್ಯಾಣೋತ್ಸವದ ಮಂಟಪಕ್ಕೆ ತರಲಾಗುವುದು. 5-15ಕ್ಕೆ ವಿಷ್ಣು ಸಹಸ್ರನಾಮ ಸಾಮೂಹಿಕ ಪಠಣ, 5-45 ರಿಂದ ಭಜನಾ ಕಾರ್ಯಕ್ರಮ, 6 ಗಂಟೆಯಿಂದ ಕಲ್ಯಾಣೋತ್ಸವ ಪ್ರಾರಂಭವಾಗಲಿದೆ. ರಾತ್ರಿ 8 ಗಂಟೆಗೆ ಭಕ್ತಾದಿಗಳಿಗೆ ತಿರುಮಲ ತಿರುಪತಿ ಶ್ರೀನಿವಾಸ ದೇವರ ದರ್ಶನ ಮಾಡಲು ಅವಕಾಶವಿದೆ. ಬಳಿಕ ಪ್ರಸಾದ ವಿತರಣೆ(ತಿರುಪತಿ ಲಡ್ಡು) ಹಾಗೂ ಪ್ರಸಾದ ರೂಪದ ಭೋಜನ ವ್ಯವಸ್ಥೆ ನಡೆಯಲಿದೆ.

ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಈ ಕಲ್ಯಾಣೋತ್ಸವದಲ್ಲಿ ಭಾಗವಹಿಸಬೇಕು ಎಂದು ಶ್ರೀನಿವಾಸ ಕಲ್ಯಾಣೋತ್ಸವ ವ್ಯವಸ್ಥಾಪಕ ಸಮಿತಿಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here