Home ಧಾರ್ಮಿಕ ಸುದ್ದಿ ಫೆ. 23, 24: ನಳೀಲುಸುಬ್ರಹ್ಮಣ್ಯ ದೇವರ ಜಾತ್ರೆ

ಫೆ. 23, 24: ನಳೀಲುಸುಬ್ರಹ್ಮಣ್ಯ ದೇವರ ಜಾತ್ರೆ

473
0
SHARE

ಸವಣೂರು : ಹುತ್ತಕ್ಕೆ ಪೂಜೆ ಸಲ್ಲುವ ಕಾರಣಿಕ ಹಾಗೂ ಸಿದ್ಧಿ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇಗುಲದ ವರ್ಷಾವಧಿ ಜಾತ್ರೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಫೆ. 23, 24ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಹಸುರುವಾಣಿ ಸಮರ್ಪಣೆ ಫೆ. 22ರಂದು ನಡೆಯಲಿದೆ.

ಫೆ. 23ರ ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ
ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 24ರ ಪ್ರಾತಃಕಾಲ ವ್ಯಾಘ್ರ ಚಾಮುಂಡಿ ನೇಮ, ಬೆಳಗ್ಗೆ ರುದ್ರ ಚಾಮುಂಡಿ ನೇಮ, ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಸಂತೋಷ್‌ ಕುಮಾರ್‌ ರೈ ನಳೀಲು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here