ಕಾಪು: ಕುತ್ಯಾರು ಶ್ರೀ ಕರ್ಮಾರುಜಡ್ಡು ಹೊಸಮನೆ ಪುಣ್ಯಕ್ಷೇತ್ರದಲ್ಲಿ ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ವರ್ತೇಶ್ವರಿ, ಶ್ರೀ ದೇವಿ ಕಲ್ಕುಡ ದೈವಗಳ ನೇಮವು ಫೆ. 16ರಂದು ನಡೆಯಲಿದೆ.
ಬೆಳಗ್ಗೆ 6.00ರಿಂದ ತುಲಾಭಾರ ಸೇವೆ, 10.30ಕ್ಕೆ ಧರ್ಮದೈವಗಳ ಭಂಡಾರ ಇಳಿಯುವುದು. ಮಧ್ಯಾಹ್ನ ಗಂಟೆ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.00ರಿಂದ ಮಹಾಕಾಳಿ, ಮಂತ್ರದೇವತೆ, ವರ್ತೇಶ್ವರಿ, ಶ್ರೀ ದೇವಿ ಕಲ್ಕುಡ ದೆ„ವಗಳ ನೇಮ, ಶ್ರೀ ಮಹಾಕಾಳಿ ಅಮ್ಮನವರಿಗೆ ಭಕ್ಷ ಸೇವೆ ಮತ್ತು ಮಹಾಪೂಜೆ ನಡೆಯಲಿದೆ.
ಫೆ.17ರಂದು ಸಂಜೆ ಎಲ್ಲ ಧರ್ಮದೈವಗಳಿಗೆ ಅಗೆಲು ತಂಬಿಲ ಸೇವೆ, ರಾತ್ರಿ 6.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ / ವ್ಯವಸ್ಥಾಪಕ ಭೋಜ ಪಾತ್ರಿ ಕುತ್ಯಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.