Home ಧಾರ್ಮಿಕ ಸುದ್ದಿ ಫೆ. 16- 19: ಕೋರಿಕ್ಕಾರು ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ನೇಮ

ಫೆ. 16- 19: ಕೋರಿಕ್ಕಾರು ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ನೇಮ

1044
0
SHARE

ಸುಳ್ಯ: ಕೋರಿಕ್ಕಾರು ಕುಟುಂಬದ ನವೀಕೃತ ತರವಾಡು ಮೂಲ ನಾಗದೇವರ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಮತ್ತು ದೈವಗಳ ನೇಮ ಫೆ. 16ರಿಂದ 19ರ ತನಕ ಅಂಕತಡ್ಕ ಸಮೀಪದ ಕೋರಿಕ್ಕಾರು ತರವಾಡಿನಲ್ಲಿ ನಡೆಯಲಿದೆ.

ಫೆ. 16 ಸಂಜೆ 6ಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಋತಿಜ್ವರ ಆಗಮನ, ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ದಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಫೆ. 17ರಂದು ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಆಶ್ಲೇಷಾ ಬಲಿ, ಪಂಚವಿಂಶತಿ ಕಲಶ ಪೂಜೆ, ಬೆಳಗ್ಗೆ 9.30ರಿಂದ ನವೀಕೃತ ತರವಾಡು ಮೂಲ ನಾಗದೇವರ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ತಂಬಿಲ, ತರವಾಡು ಮನೆಯಲ್ಲಿ ಮುಡಿಪು ಪೂಜೆ, ಧರ್ಮ ದೈವಗಳಿಗೆ, ನಾಗ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ. 18ರಂದು ಸಂಜೆ 6ಕ್ಕೆ ಅಬ್ಬೆಜಲಾಯ, ಧರ್ಮದೈವ ವ್ಯಾಘ್ರಚಾಮುಂಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆಯುವುದು, ಬಳಿಕ ಕಲ್ಲುರ್ಟಿ, ಕೊರತ್ತಿ, ಮೂಕಾಂಬಿ ಗುಳಿಗ, ಅಬ್ಬೆಜಲಾಯ ದೈವಗಳಿಗೆ ನೇಮ ನಡೆಯಲಿದೆ. ಅನಂತರ ಹಿರಿಯರಿಗೆ ಅಗೇಲು ಸಮರ್ಪಣೆ ನಡೆಯಲಿದೆ.

ಫೆ. 19ರಂದು ಬೆಳಗ್ಗೆ 9ಕ್ಕೆ ಧರ್ಮದೈವ ವ್ಯಾಘ್ರಚಾಮುಂಡಿ, ಪಂಜುರ್ಲಿ ದೈವಗಳಿಗೆ ನೇಮ ನಡೆಯಲಿದೆ ಎಂದು ಕೋರಿಕ್ಕಾರು ಕುಟುಂಬದ ಯಜಮಾನ ಹಾಗೂ ಕೋರಿಕ್ಕಾರು ತರವಾಡು ಟ್ರಸ್ಟ್‌ ಗೌರವಾಧ್ಯಕ್ಷ ವೆಂಕಪ್ಪ ರೈ ಪಿ. ಪಡ್ಡಂಬೈಲು, ಕಾರ್ಯಾಧ್ಯಕ್ಷ ಮಂಜಪ್ಪ ರೈ ಬೆಳ್ಳಾರೆ, ಗುಡ್ಡಪ್ಪ ರೈ ಕೋರಿಕ್ಕಾರು ಹಾಗೂ ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here