ಕಾರ್ಕಳ : ಅಸ್ಸಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ.ಸಿ.) ದರ್ಗಾ ಶರೀಫ್ ಸಾಣೂರು ಇಲ್ಲಿನ 61ನೇ ಉರೂಸ್ ಮುಬಾರಕ್ ಕಾರ್ಯಕ್ರಮ ಫೆ. 15-17ರ ವರೆಗೆ ನಡೆಯಲಿದೆ. ಫೆ. 15ರಂದು ಪೂರ್ವಾಹ್ನ 8 ಗಂಟೆಗೆ ಸಾಣೂರು ಮಸೀದಿ ಅಧ್ಯಕ್ಷ ಬಿ.ಎಸ್. ಆಲಿಯಬ್ಬ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರಮುಖ ಧಾರ್ಮಿಕ ನೇತಾರರು, ವಿವಿಧ ರಂಗಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆ. 17ರಂದು ಮಧ್ಯಾಹ್ನದ ಬಳಿಕ ಮೌಲಿದ್ ಪಾರಾಯಣ, ಸಂಜೆ ಸಂದಲ್ ಮೆರವಣಿಗೆ ನಡೆಯಲಿದ್ದು, ಅಂದು ಅನ್ನಸಂತರ್ಪಣೆ ನಡೆಯಲಿದೆ.