ಕಾಪು : ಮಿಸ್ಕೀನ್ ಎಂಪವರ್ವೆುಂಟ್ ಫೌಂಡೇಶನ್ ಪೊಲಿಪು-ಕಾಪು ಇವರ ವತಿಯಿಂದ ಪವಿತ್ರ ಹಜ್ ಯಾತ್ರೆಗೆ ತೆರಳಲಿರುವ ಪೊಲಿಪು ಜಾಮೀಯಾ ಮಸೀದಿಯ ಸದಸ್ಯ ಎಸ್. ಆರ್. ಉಮರ್ ಮತ್ತು ಶಾಇರ್ ಶೌಕತ್ ಆಲೀ ಎಂ.ಎಂ.ಎಸ್. ಇವರಿಗೆ ಸಮ್ಮಾನಿಸಿ, ಬೀಳ್ಕೊಡುವ ಸಮಾರಂಭವು ಹಿದಾಯತುಲ್ ಇಸ್ಲಾಂ ಮದ್ರಸದ ಹಾಲ್ನಲ್ಲಿ ನಡೆಯಿತು.
ಪೊಲಿಪು ಜಾಮೀಯಾ ಮಸೀದಿಯ ಮಾಜಿ ಖತೀಬ / ಕಾಪು ಉಸ್ತಾದ್ ಅಲ್ ಹಾಜ್ ಪಿ.ಬಿ ಅಹಮದ್ ಮುಸ್ಲಿಯರ್ ಸಮ್ಮಾನಿಸಿದರು. ಸಮಿತಿಯ ಅಧ್ಯಕ್ಷ ಶೇಖ್ ನಝೀರ್ ಕೊಂಬಗುಡ್ಡೆ, ಸಲಹೆಗಾರರಾದ ಅಮೀರ್ ಹಂಝ ಕಾಪು, ಇಂಮ್ತಿಯಾಝ್ ಅಹಮದ್ ಕೋತಲ್ಕಟ್ಟೆ, ಮುಅಲ್ಲಿಂ ತಾಸೀಫ್ ಉಸ್ತಾದ್ ಹಸನ್ ಮಜೂರು, ರಝಾಕ್ ಮಜೂರು ಉಪಸ್ಥಿತರಿದ್ದರು.