Home ಧಾರ್ಮಿಕ ಸುದ್ದಿ ಐವರ್ನಾಡು: ಬ್ರಹ್ಮಕಲಶ ಪೂರ್ವಭಾವಿ ಸಭೆ

ಐವರ್ನಾಡು: ಬ್ರಹ್ಮಕಲಶ ಪೂರ್ವಭಾವಿ ಸಭೆ

1303
0
SHARE

ಸುಳ್ಯ : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 5ರಿಂದ 11ರ ತನಕ ನಡೆಯಲಿರುವ ಬ್ರಹ್ಮಕಲಶದ ಪೂರ್ವಭಾವಿ ಸಭೆಯು ಐವರ್ನಾಡು ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್‌.ಎನ್‌. ಮನ್ಮಥ ಅವರು ಪೂರ್ವ ತಯಾರಿ ಮತ್ತು ಗ್ರಾಮ ಸಮಿತಿ, ವಿವಿಧ ಸಮಿತಿ ಸದಸ್ಯರ ಜವಾಬ್ದಾರಿ ಕುರಿತು ಮಾಹಿತಿ ನೀಡಿದರು.

ಗ್ರಾಮ ಪ್ರತಿ ಮನೆಗಳಿಗೆ ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲು ನಿರ್ಧರಿಸಲಾಯಿತು. ವಾಹನ ಪಾರ್ಕಿಂಗ್‌, ರಸ್ತೆ ಬದಿ ವಿದ್ಯುತ್‌ದೀಪಾಲಂಕಾರ, ಸ್ವಚ್ಛತೆ, ಹಸುರುವಾಣಿ ಸಮರ್ಪಣೆ, ಅಲಂಕಾರ, ಊಟ-ಉಪಚಾರ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೋಡಣೆ ಬಗ್ಗೆ ಚರ್ಚೆ ನಡೆಯಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಬೆಳ್ಯಪ್ಪ ಗೌಡ ದೇರಾಜೆ, ಜಯಪ್ರಸಾದ್‌ ಕಜೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here