ಮಣ್ಣಗುಡ್ಡೆ: ಇಲ್ಲಿನ ಶ್ರೀ ಈಶ್ವರ ದೇವಸ್ಥಾನದ (ಈಶ್ವರಸ್ಥಾನ) ಪ್ರತಿಷ್ಠಾ ಮಹೋತ್ಸವ ಹಾಗೂ ಧರ್ಮದೈವ ಶ್ರೀ ಕಾಂತೇರಿ ಧೂಮಾವತಿ, ಜಾರಂದಾಯ ಬಂಟ ಹಾಗೂ ಪರಿವಾರ ದೈವಗಳ ಬಂಡಿ ನೇಮದ ಪೂರ್ವಭಾವಿ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಜರಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೀರ್ತಿ ಸುವರ್ಣ, ದೈವ ಪಾತ್ರಿ ಅಣ್ಣು ಪೂಜಾರಿ, ಗಣೇಶ್ ಪ್ರಸಾದ್, ಸೇವಾ ಸಮಿತಿ ಗೌರವಾಧ್ಯಕ್ಷ ದೇವಾನಂದ ಪೈ, ಅಧ್ಯಕ್ಷ ದಿನಕರ ಶೆಟ್ಟಿ, ಗೌರವ ಸಲಹೆಗಾರ ಡಾ| ಬಿ.ಜಿ. ಸುವರ್ಣ, ಪ್ರ.ಕಾರ್ಯದರ್ಶಿ ನಾಗೇಶ್ ಕುಮಾರ್, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ರಾಜೇಂದ್ರ ಕುಮಾರ್, ಖಜಾಂಚಿ ಪ್ರಮೋದ್ ಆಳ್ವ, ಸಮಿತಿಯ ಗಣೇಶ್ ಪೈ, ಅಜಿತ್, ದಿನೇಶ್, ಅರ್ಜುನ್ ಪ್ರಕಾಶ್, ತೇಜಾಕ್ಷಿ ಕೀರ್ತಿರಾಜ್, ಪ್ರಫುಲ್ಲ ಸುರೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿ ಖಜಾಂಚಿ ವಿಶುಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಸತೀಶ್ ಶೆಟ್ಟಿ ಕೊಡಿಯಾಲಬೈಲ್ ವಂದಿಸಿದರು.