ಈಶ್ವರಮಂಗಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆ ಆರಂಭವಾಗಿದ್ದು, ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗ ದರ್ಶನದಲ್ಲಿ ಶನಿವಾರ ದೇಗುಲದಲ್ಲಿ ಧ್ವಜಾರೋಹಣ ನಡೆಯಿತು.
ಶುಕ್ರವಾರ ಸಂಜೆ ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಬಳಿಯಿಂದ ನೂಜಿಬೈಲು, ಪೆರ್ನಾಜೆ, ಸಾಂತ್ಯ, ಮುಂಡ್ಯ, ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ನಾಳ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತ್ತಡ್ಕ ಮುಂತಾದ ಕಡೆಗಳಿಂದ ದೇಗುಲಕ್ಕೆ ಹಸುರುವಾಣಿ ಹೊರಕಾಣಿಕೆಯ ಮೆರವಣಿಗೆ ನಡೆಯಿತು. ಕುತ್ಯಾಳ ಶ್ರೀ
ಮಹಾವಿಷ್ಣು ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಕರ್ನೂರು ಗುತ್ತು ರತನ್ ನಾೖಕ್ ಹೊರೆಕಾಣಿಕೆ ಮೆರವಣಿಗೆ ಯನ್ನು ಉದ್ಘಾಟಿಸಿದರು. ಉಗ್ರಾಣ ತುಂಬುವುದು, ದುರ್ಗಾಪೂಜೆ ನಡೆಯಿತು. ಶನಿವಾರ ಬೆಳಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಬಲಿವಾಡು ಶೇಖರಣೆ ನಡೆಯಿತು.
ಈಶ್ವರಮಂಗಲ ಡೆಂಬಾಳೆ ಕೃಷ್ಣ ಶೆಟ್ಟಿ ನೆಲ್ಲಿತ್ತಡ್ಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಸಹಯೋಗದೊಂದಿಗೆ ಆರ್. ಬಾಬು ಪಾಟಾಳಿ ಇವರ ಸಂಯೋಜನೆಯಲ್ಲಿ “ಶರಸೇತು ಬಂಧ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದೇವರ ಉತ್ಸವ, ಅನ್ನ ಸಂತರ್ಪಣೆ
ನಡೆಯಿತು. ಪ್ರಧಾನ ಆರ್ಚಕ ರವೀಂದ್ರ ಮಾಣಿಲತ್ತಾಯ, ಪವಿತ್ರಪಾಣಿ ಅದಿಂಜ ಶಂಕರನಾರಾಯಣ ಕುಂಜತ್ತಾಯ, ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ರೈ ಸಾಂತ್ಯ, ಅಧ್ಯಕ್ಷ ನಿತಿನ್ ಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಚರಣ್ ರಾಜ್ ಮಡ್ಯಲಮಜಲು, ಖಚಾಂಚಿ ವಿಕ್ರಂ ರೈ ಸಾಂತ್ಯ, ಗೌರವ ಸಲಹೆಗಾರರು, ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸಮಿತಿಯ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.
ಇಂದು ಉತ್ಸವ
ರವಿವಾರ ಜಾತ್ರೆ ಪ್ರಯುಕ್ತ ಹಗಲು ಮತ್ತು ರಾತ್ರಿ ದೇವರ ಉತ್ಸವ, ಈಶ್ವರಮಂಗಲ ಎಂಕ್ಲು ತುಳುವರೆ ಕಲಾ ಬಳಗದಿಂದ ಎಂ. ರಾಮ ಈಶ್ವರಮಂಗಲ ವಿರಚಿತ “ಇಂಚಿನ ಕತೆಲ ಉಂಡಾ…’ ತುಳು ಸಾಮಾಜಿಕ ನಾಟಕ ನಡೆಯಲಿದೆ