ಕುಂಬಳೆ : ಕಾವುಗೋಳಿ ಎರಿಯಾಕೋಟ ಶ್ರೀ ಭಗವತಿ ಕ್ಷೇತ್ರ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಮತ್ತು ಕಳಿಯಾಟ ಮಹೋ ತ್ಸವವು ಬ್ರಹ್ಮಶ್ರೀ ವಿಷ್ಣು ಪ್ರಕಾಶ್ ಕಾವು ಪಟ್ಟೇರಿ ಕಾವುಮಠ ತಂತ್ರಿವರ್ಯರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ವಿಧ್ಯುಕ್ತವಾಗಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಕೊನೆಯ ದಿನವಾದ ಫೆ. 12ರಂದು ಶ್ರೀ ಪುಲಿಕಂಡನ್ ದೈವಂ ವೆಳ್ಳಾಟಂ, ಶ್ರೀ ಕಾಳಪುಲಿಯನ್ ದೈವಂ ವೆಳ್ಳಾಟಂ, ಶ್ರೀ ಪುಲ್ಲೂರ್ಣಂ ದೈವಂ ವೆಳ್ಳಾಟಂ, ಶ್ರೀ ಪುಲ್ಲೂಣಂ ದೈವಂ ವೆಳ್ಳಾಟಂ, ಉತ್ಸವಬಲಿ, ಶ್ರೀ ಪುಲ್ಲೂರಾಳಿ ದೈವಂ ತೋಟ್ಟಂ, ಶ್ರೀ ವಿಷ್ಣುಮೂರ್ತಿ ದೈವಂ ತೊಡಂಙಲ್, ಶ್ರೀ ವಿಷ್ಣುಮೂರ್ತಿ ದೈವಂಕುಳಿಚೇಟ್ಟಂ, ಶ್ರೀ ಕಾಳಪುಲಿಯನ್ ದೈವಂ, ಶ್ರೀ ಪುಲಿಕಂಡನ್ ದೈವಂ,ಶ್ರೀ ಪುಲೂ ್ಲರಾಳಿ ದೈವಂ, ತುಲಾಭಾರ, ಶ್ರೀ ಪುಲ್ಲೂಣಂ ದೈವಂ (ಹೂಮುಡಿ) ಕಲ್ಲಂ ಗಡಿ ಹೊಸಮನೆಗೆ ಭೇಟಿ ನೀಡಿದವು.
ಶ್ರೀ ವಿಷ್ಣುಮೂರ್ತಿ ದೈವಂ, ಶ್ರೀ ಐವರ್, ಶ್ರೀ ಪುಲ್ಲೂರ್ಣ ದೈವ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳು ತಂತ್ರಿಯವರ ಕಾವು ಮಠಕ್ಕೆ ಭೇಟಿ ನೀಡಿದುವು.
ಕಾವುಗೋಳಿ ಭಂಡಾರಮನೆ ತರವಾಡಿಗೂ ಕ್ಷೇತ್ರ ಭಂಡಾರ ಮನೆಗಳಿಗೂ ಭೇಟಿ ನೀಡಿದ ಬಳಿಕ ಚಪ್ಪರ ಮದುವೆ ಜರಗಿ ಹೂಮುಡಿ ಅವರೋಹಣ, ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.