Home ಧಾರ್ಮಿಕ ಸುದ್ದಿ ಹೊರಾಡಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ನೆರವು

ಹೊರಾಡಿ ಕ್ಷೇತ್ರ ಜೀರ್ಣೋದ್ಧಾರಕ್ಕೆ ನೆರವು

1673
0
SHARE

ಬೆಳ್ತಂಗಡಿ : ಹೊರಾಡಿ ಶ್ರೀ ರೌದ್ರಭೈರವಿ ಸಹಪರಿವಾರ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ
ಯವರು 2 ಲಕ್ಷ ರೂ. ಅನುದಾನ ನೀಡಿದ್ದಾರೆ.

ಅನುದಾನದ ಡಿ.ಡಿ.ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಅವರು ದೈವಸ್ಥಾನದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಿರಂಜನ ಜೋಶಿ ಅವರಿಗೆ ಹಸ್ತಾಂತರಿಸಿದರು.

ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಅಳದಂಗಡಿ ವಲಯ ಮೇಲ್ವಿಚಾರಕಿ ಮಲ್ಲಿಕಾ, ಪಿಲ್ಯ ಒಕ್ಕೂಟ ಸೇವಾಪ್ರತಿನಿಧಿ ಹರಿಣಾಕ್ಷಿ ಲತೀಶ್‌, ಸಮಿತಿ ಜತೆ ಕಾರ್ಯದರ್ಶಿ ಹಾಗೂ ಯೋಜನೆಯ ವಲಯಾಧ್ಯಕ್ಷ ದೀಪಕ್‌ ಆಠವಳೆ, ಉಪಾಧ್ಯಕ್ಷ ವಿಶ್ವನಾಥ ಡೋಂಗ್ರೆ, ಊರಿನ ಹಿರಿಯರಾದ ಮುರಳೀಧರ ಗೋಖಲೆ, ಪ್ರಭಾಕರ ಆಠವಳೆ, ಪದ್ಮನಾಭ ಜೋಶಿ, ತಾಂತ್ರಿಕ ತರಬೇತುದಾರ ಶ್ರೀಕಾಂತ ಪಟವರ್ಧನ್‌ ಮತ್ತಿತರರು ಉಪಸ್ಥಿತರಿದ್ದರು. ಮಹಾವೀರ ಅಜ್ರಿ ಅವರು ದೈವಸ್ಥಾನದ ಆವರಣದಲ್ಲಿ ರಂಬೂಟಾನ್‌ ಸಸಿ ನೆಟ್ಟು ನೀರೆರೆದರು.

LEAVE A REPLY

Please enter your comment!
Please enter your name here