Home ಧಾರ್ಮಿಕ ಕಾರ್ಯಕ್ರಮ ಎಲ್ಲೂರು: ರಾಶಿಪೂಜಾ ಮಹೋತ್ಸವ ಸಂಪನ್ನ

ಎಲ್ಲೂರು: ರಾಶಿಪೂಜಾ ಮಹೋತ್ಸವ ಸಂಪನ್ನ

1228
0
SHARE

ಕಾಪು: ಮಹತೋಭಾರ ಎಲ್ಲೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಸೀಮೆಯ ಗ್ರಾಮಸ್ಥರ ವಂತಿಗೆಯಿಂದ ವರ್ಷಂಪ್ರತಿ ಜರಗುವ ರಾಶಿಪೂಜಾ ಮಹೋತ್ಸವವು ಜ.29ರಂದು ನಡೆಯಿತು.

ದೇಗುಲದ ತಂತ್ರಿ ವೇ|ಮೂ| ಬೆಟ್ಟಿಗೆ ವೆಂಕಟರಾಜ ತಂತ್ರಿ ನೇತೃತ್ವದಲ್ಲಿ, ವೇ| ಮೂ| ವೆಂಕಟೇಶ ಭಟ್‌ ಎಲ್ಲೂರು ಇವರ ಅರ್ಚಕತ್ವದಲ್ಲಿ, ಕ್ಷೇತ್ರದ ಪವಿತ್ರಪಾಣಿ ಕೆ.ಎಲ್‌. ಕುಂಡಂತಾಯ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಬೆಳಪು ಗ್ರಾಮದ ಮಲಂಗುಳಿ ಗ್ರಾಮಸ್ಥರಿಂದ ಭಾರತೀ ರಮಣ ಶ್ರೀ ಹರಿನಾಮ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ಪಲ್ಲ ಪೂಜೆ ಸಹಿತ ಮಹಾ ಅನ್ನಸಂತರ್ಪಣೆ ನಡೆಯಿತು.

ಸಮಿತಿಯ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ್‌ ಡಿ. ಶೆಟ್ಟಿ
ಮಾಣಿಯೂರು ಬರ್ಪಾಣಿ, ನಿರಂಜನ್‌ ಶೆಟ್ಟಿ ಕಿನ್ನೋಡಿಗುತ್ತು ಎಲ್ಲೂರು, ನರಸಿಂಹ ಜೆನ್ನಿ ಪಣಿಯೂರು, ಸೋಮನಾಥ ಪೂಜಾರಿ ಸಾಂತೂರು, ಜಯಲಕ್ಷ್ಮೀ ಎಸ್‌. ಆಳ್ವ ಪಾದೂರುಗುತ್ತು, ವಿಜಯಲಕ್ಷ್ಮೀ ದೇವಾಡಿಗ ಬೆಳಪು, ಬಾಲಕೃಷ್ಣ ಪಣಿಯೂರು, ಗ್ರಾಮ ಸೀಮೆ ಮತ್ತು ಊರ-ಪರವೂರ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here