Home ಧಾರ್ಮಿಕ ಸುದ್ದಿ ಏಳಿಂಜೆ ಆದಿಜಾರಂದಾಯ ದೈವಸ್ಥಾನ: ಪೂರ್ವಭಾವಿ ಸಭೆ

ಏಳಿಂಜೆ ಆದಿಜಾರಂದಾಯ ದೈವಸ್ಥಾನ: ಪೂರ್ವಭಾವಿ ಸಭೆ

322
0
SHARE

ಕಿನ್ನಿಗೋಳಿ: ಏಳಿಂಜೆ ಆದಿ ಜಾರಂದಾಯ ದೈವಸ್ಥಾನದ ಜಾರಂದಾಯ ದೇಗುಲಕ್ಕೆ ಬೆಳ್ಳಿ ಅಣಿ ನಿರ್ಮಾಣ ಮಾಡುವ ಬಗ್ಗೆ ಪೂರ್ವಭಾವಿ ಸಭೆಯು ದೇಗುಲದಲ್ಲಿ ನಡೆಯಿತು.

ಕ್ಷೇತ್ರದ ಆಡಳಿತ ಮೊಕ್ತೇಸರ ಏಳಿಂಜೆ ಭಂಡಸಾಲೆ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ, ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ ನಿರಂತರವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ
ಕಾರ್ಯಕ್ರಮಗಳ ಜತೆ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆದಿದ್ದು, ಈ ಬಾರಿ ದೈವಕ್ಕೆ ನಿರ್ಮಿಸಲು ಉದ್ದೇಶಿರುವ ಬೆಳ್ಳಿಯ ಅಣಿ ನಿರ್ಮಾಣ ಕಾರ್ಯಕ್ಕೂ ಎಲ್ಲರೂ ಸಹಕರಿಸಬೇಕೆಂದರು.

ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ದೇಗುಲದ ಪ್ರಧಾನ ಅರ್ಚಕ ಗಣೇಶ್‌ ಭಟ್‌, ಏಳಿಂಜೆ ಯೋಗೀಶ್‌ ರಾವ್‌, ಬಂಕೆಡಬಾವ ಭಾಸ್ಕರ ಶೆಟ್ಟಿ, ಅಂಗಡಿಗುತ್ತಿನ ಗುತ್ತಿನಾರ್‌ ಬಾಲಕೃಷ್ಣ ಶೆಟ್ಟಿ, ತಾವಡೆಮನೆ ಸೀತಾರಾಮ ಶೆಟ್ಟಿ, ಉಮೇಶ್‌ ಪೂಜಾರಿ ಮತ್ತಿತರರಿದ್ದರು.

ಏಳಿಂಜೆ ಕೃಷ್ಣ ಸಾಲ್ಯಾನ್‌, ಅಂಗಡಿಗುತ್ತು ಶಂಭು ಶೆಟ್ಟಿ, ನವಚೇತನ ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ವಸಂತ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ವಿಶ್ವನಾಥ ಪೂಜಾರಿ, ಲಕ್ಷ್ಮಣ್‌ ಪೂಜಾರಿ, ಸುಧಾಕರ ಸಾಲ್ಯಾನ್‌, ಬಾಲಕೃಷ್ಣ ಶೆಟ್ಟಿ, ಹೇಮನಾಥ ಶೆಟ್ಟಿ, ಕೃಷ್ಣ ಮೂಲ್ಯ, ಚಂದಯ್ಯ, ಸದಾನಂದ ಶೆಟ್ಟಿ, ಹರೀಶ್‌ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಲಕ್ಷ್ಮಣ್‌ ಬಿ.ಬಿ. ಏಳಿಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here